Publish Date: Sat, 19 Feb 2022 (07:30 IST)
Updated Date: Sat, 19 Feb 2022 (08:02 IST)
ಬೆಂಗಳೂರು : ಬಿಬಿಎಂಪಿಯ ಎಡವಟ್ಟಿನಿಂದ ಬೆಂಗಳೂರಿನಲ್ಲಿ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ.
ಸಿಕ್ಕ ಸಿಕ್ಕ ಕಡೆಯಲೆಲ್ಲಾ ಗುಂಡಿಯಿಂದ ತುಂಬಿ ತುಳುಕುತ್ತಾ ಇದೆ ಬೆಂಗಳೂರಿನ ರಸ್ತೆಗಳು. ಇದರಿಂದ ಗರಂ ಆದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಭಾಕರ್ ಗೆ ಛೀಮಾರಿ ಹಾಕಿದೆ.
ನಿಮಗೆ ಗುಂಡಿ ಮುಚ್ಚೋಕೆ ಸಾಧ್ಯವಾಗದೇ ಇದ್ದರೆ ನಾನೇ ಮಿಲಿಟರಿ ಕರೆಸ್ತೇನೆ ಅಂತ ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಪದೇ ಪದೇ ರಸ್ತೆ ಕಿತ್ತು ಹೋಗೋದಕ್ಕೂ ಬೇಸರ ವ್ಯಕ್ತಪಡಿಸಿದ್ದಾರೆ.