ಬೆಂಗಳೂರು : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೂರ್ಣ ಪೀಠದಲ್ಲಿ 4ನೇ ದಿನವೂ ಹಿಜಬ್ ಅರ್ಜಿ ವಿಚಾರವನ್ನ ಕಾವೇರಿದ ವಾದ ನಡೀತು.
ಅರ್ಜಿದಾರರ ಪರ ವಕೀಲರಾದ ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದ್ರು. ಶಿಕ್ಷಣ ಕಾಯ್ದೆ ಪ್ರಕಾರ 5 ವರ್ಷಗಳ ಕಾಲ ಸಮವಸ್ತ್ರ ಬದಲಿಸಲು ಆಗಲ್ಲ. ಬದಲು ಮಾಡಿದ್ರೂ 1 ವರ್ಷ ಮುಂಚಿತವಾಗಿ ಪೋಷಕರಿಗೆ ಮಾಹಿತಿ ನೀಡಬೇಕು.
ಸರ್ಕಾರ ಯೂನಿಫಾರಂ ನಿರ್ಧರಿಸುವ ಅಧಿಕಾರವನ್ನು ಕಾಲೇಜು ಸಮಿತಿಗೆ ನೀಡಿದೆ. ಆ ಅಧಿಕಾರ ಕಾಲೇಜು ಸಮಿತಿಗೆ ಇಲ್ಲ. ಸಮಿತಿಯನ್ನು ಸರ್ಕಾರದ ಅಧೀನ ಎಂದು ಪರಿಗಣಿಸುವುದಾದರೆ, ಶಾಸಕ ಕೂಡ ಸರ್ಕಾರದ ಅಧೀನ ಆಗ್ತಾರೆ. ಶಾಸಕರು ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುತ್ತಾರೆ.