Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿಜಬ್ ವಿವಾದ ಹೈಕೋರ್ಟ್ನಲ್ಲಿ ಏನಾಯ್ತು..?

ಹಿಜಬ್ ವಿವಾದ ಹೈಕೋರ್ಟ್ನಲ್ಲಿ ಏನಾಯ್ತು..?
ಬೆಂಗಳೂರು , ಬುಧವಾರ, 16 ಫೆಬ್ರವರಿ 2022 (06:12 IST)
ಬೆಂಗಳೂರು : ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್ನ ಪೂರ್ಣ ಪೀಠದಲ್ಲಿ ಮೂರನೇ ದಿನವೂ ವಿಚಾರಣೆ ನಡೀತು.

ಹೈಕೋರ್ಟ್ನ ಮಧ್ಯಂತರ ಆದೇಶದಿಂದ ಮೂಲಭೂತ ಹಕ್ಕು ಅಮಾನತು ಆಗಿದೆ.

ಹೀಗಾಗಿ ಮಧ್ಯಂತರ ಆದೇಶ ಬದಲಿಸಿ, ಸಮವಸ್ತ್ರದ ಜೊತೆಗೆ ಹಿಜಬ್ಗೂ ಅವಕಾಶ ಕೊಡಬೇಕು ಅಂತ ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ವಾದ ಮುಗಿಸಿದ್ರು.

ಇದಕ್ಕೂ ಮುನ್ನ ಸಾರ್ವಜನಿಕ ಸುವ್ಯವಸ್ಥೆ ಎಂಬ ಸರ್ಕಾರದ ಬಗ್ಗೆ ವಾದ ಮುಂದುವರಿಸಿದ ಅರ್ಜಿದಾರ ಪರ ವಕೀಲರು, ಸಾರ್ವಜನಿಕ ಸುವ್ಯವಸ್ಥೆ ಭಾಷಾಂತರ ಕುರಿತ ಸರ್ಕಾರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ‘ಸಾರ್ವಜನಿಕ ಸುವ್ಯವಸ್ಥೆ’ ಎಂಬ ಪದದ ಬಗ್ಗೆ ಸರ್ಕಾರದ ಭಾಷಾಂತರಕ್ಕೆ ಆಕ್ಷೇಪಿಸಿದರು. 

ಸಂವಿಧಾನದಲ್ಲಿ ಹೇಳಿದ ಅರ್ಥ ಬಿಟ್ಟು ಬೇರೆ ಅರ್ಥ ಹೇಳಲಾಗದು. ಸಾರ್ವಜನಿಕ ಸುವ್ಯವಸ್ಥೆ ಕಾರಣ ಕೊಟ್ಟು, ಹಕ್ಕುಗಳನ್ನು ನಿರ್ಬಂಧಿಸುವಂತಿಲ್ಲ ಅಂತ ಸುಪ್ರೀಂಕೋರ್ಟ್ ತೀರ್ಪು ಹೇಳಿದೆ. ಮೂಗುತಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ಶಾಲೆ ಹಾಕಿದ್ದ ನಿರ್ಬಂಧವನ್ನು ಕೋರ್ಟ್ ವಜಾ ಮಾಡಿತ್ತು ಎಂದು ತಿಳಿಸಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ವಿವಾದ- ಸ್ವಾತಂತ್ರ್ಯದ ದುರ್ಬಳಕೆ ಬೇಡ - ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ್ ಸಲಹೆ