Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಏಪ್ರಿಲ್ 1 ಹೊಸ ಆರ್ಥಿಕ ವರ್ಷದ ಆರಂಭ. ಹೀಗಾಗಿ ಹಲವು ಆರ್ಥಿಕ ಬದಲಾವಣೆ ಮತ್ತು ಏರಿಳಿತಗಳಿಗೆ ಏಪ್ರಿಲ್ ತಿಂಗಳು ಸಾಕ್ಷಿ ಆಗಲಿದೆ.
ಈ ಹಿನ್ನೆಲೆಯಲ್ಲಿ ಏ.1ರಿಂದ ಯಾವೆಲ್ಲಾ ನಿಯಮಗಳು ಬದಲಾಗುತ್ತವೆ ಎಂಬ ವಿವರ ಇಲ್ಲಿದೆ.
ನೋವು ನಿವಾರಕಗಳು, ಆ್ಯಂಟಿ ವೈರಸ್ಗಳು ಸೇರಿದಂತೆ ಅನೇಕ ಔಷಧಗಳ ಬೆಲೆ ಏ.1ರಿಂದ ಏರಿಕೆಯಾಗಲಿದೆ. ಶೇ.10ರಷ್ಟುಬೆಲೆ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ.
ಪ್ಯಾರಸಿಟಮಲ್, ಆ್ಯಂಟಿಬಯಾಟಿಕ್ ಅಜಿತ್ರೊಮೈಸಿನ್, ಬ್ಯಾಕ್ಟಿರಿಯಲ್ ಸೋಂಕು ನಿವಾರಕಗಳು, ಆ್ಯಂಟಿ ಅನೀಮಿಯಾ, ವಿಟಮಿನ್ಸ್ ಮತ್ತು ಮಿನರಲ್ಸ್ ಸೇರಿದಂತೆ 800 ಅಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ.