ದೇವರನಾಡು ಕೇರಳದಲ್ಲಿ ಮಾಹಾಮಾರಿ ಕೊರೊನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪನ ವಾರ್ಷಿಕ ತೀರ್ಥಯಾತ್ರೆಯ ಸಮಯದಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ. ಕೊರೊನಾ ಸೋಂಕಿನ ಆರ್ಭಟದಿಂದ ಪ್ರತಿದಿನ ಕೇವಲ 25 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಮಾತ್ರ ಅವಕಾಶ ನೀಡಲಾಗಿದೆ. ಈ ನಡುವೆ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರು ಈಗಲೇ ನೊಂದಾವಣಿ ಮಾಡಿಕೊಂಡಿದ್ದಾರೆ ಎಂದು ವರದಿಯು ಹೇಳಿದೆ. ಈ ವರ್ಷ ದಿನಕ್ಕೆ 25 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡುವ ಮೂಲಕ ಒಟ್ಟು 15.25 ಲಕ್ಷ ಜನರಿಗೆ ದೇವರ ದರ್ಶನ ಪಡೆಯಲು ಅವಕಾಶ ಮಾಡಿ ಕೊಡಲಾಗಿದೆ ಎಂದು ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ತಿಳಿಸಿದ್ದಾರೆ.