ನವದೆಹಲಿ : ಓಮಿಕ್ರಾನ್ ಸೋಂಕಿತರ ಸಂಖ್ಯೆ ದೆಹಲಿಯಲ್ಲಿ ಮಿತಿ ಮೀರಿ ಏರಿಕೆ ಕಾಣುತ್ತಿದ್ದಂತೆ ದೆಹಲಿ ಸರ್ಕಾರ ಇನ್ನಷ್ಟು ಬಿಗಿ ಕ್ರಮಕ್ಕೆ ಮುಂದಾಗಿದೆ.
ದೆಹಲಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಚೇರಿಗಳಲ್ಲಿ ಶೇ.50ರಷ್ಟು ಮಾತ್ರ ಉದ್ಯೋಗಿಗಳೊಂದಿಗೆ ಕೆಲಸ ನಿರ್ವಹಿಸಲು ಮತ್ತು ಮದುವೆ ಸಮಾರಂಭಗಳಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ 50% ಉದ್ಯೋಗಿಗಳೊಂದಿಗೆ ಮಾತ್ರ ಕೆಲಸ ನಿರ್ವಹಿಸಲು ಅವಕಾಶ. ಅದೇ ರೀತಿ ಮಾಲ್, ಅಂಗಡಿ ಮುಂಗಟ್ಟುಗಳು ಕೂಡ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ಸರ್ಕಾರ ಸೂಚಿಸಿದ್ದು ಮದುವೆ ಸಮಾರಂಭಗಳಿಗೆ ಕೇವಲ 20 ಜನ ಮಾತ್ರ ಅವಕಾಶ ನೀಡಿ ಹೊಸ ನಿಯಮ ಜಾರಿಗೊಳಿಸಿದೆ.
ದೆಹಲಿಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಇದರೊಂದಿಗೆ ಮಾಲ್ ಮತ್ತು ಅಂಗಡಿಗಳು ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ವರೆಗೆ ಸಮ-ಬೆಸ ದಿನಾಂಕಗಳ ಆಧಾರದಲ್ಲಿ ತೆರೆಯಲು ಅವಕಾಶ ನೀಡಿದ್ದು, ಆ ಬಳಿಕ ಆನ್ಲೈನ್ ಶಾಪಿಂಗ್ ಮುಂದುವರಿಸಬಹುದು ಎಂದು ಆದೇಶಿಸಿದೆ.
ಥಿಯೇಟರ್, ಜಿಮ್ಗಳನ್ನು ಮತ್ತೆ ಬಂದ್ ಮಾಡಿದ್ದು, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ರಾತ್ರಿ 10 ಗಂಟೆ ವರೆಗೆ 50% ಅವಕಾಶ ಕಲ್ಪಿಸಿದೆ. ಅದಲ್ಲದೆ ಕಟ್ಟಿಂಗ್ ಶಾಪ್, ಬ್ಯೂಟಿ ಪಾರ್ಲರ್ಗಳಿಗೆ ಅವಕಾಶ ನೀಡಿದೆ. ರಾಜಕೀಯ, ಧಾರ್ಮಿಕ, ಹಬ್ಬಗಳಿಗೆ ನಿರ್ಬಂಧ ವಿಧಿಸಲಾಗಿದೆ.