Publish Date: Fri, 21 Sep 2018 (05:50 IST)
Updated Date: Fri, 21 Sep 2018 (05:51 IST)
ಬೆಂಗಳೂರು: ಯಡಿಯೂರಪ್ಪ ವಿರುದ್ಧ ಸವಾಲು ಹಾಕುವ ಭರದಲ್ಲಿ ಬಿಜೆಪಿ ವಿರುದ್ಧ ಜನರೇ ದಂಗೆ ಏಳುವಂತೆ ಕರೆ ನೀಡುತ್ತೇನೆ ಎಂದು ವಿವಾದ ಸೃಷ್ಟಿಸಿಕೊಂಡಿದ್ದ ಸಿಎಂ ಕುಮಾರಸ್ವಾಮಿಗೆ ಇದೀಗ ತಂದೆ, ಜೆಡಿಎಸ್ ವರಿಷ್ಠ ದೇವೇಗೌಡರ ಅಭಯ ಸಿಕ್ಕಿದೆ.
ಬಿಜೆಪಿ ಆಪರೇಷನ್ ಕಮಲದ ಭೀತಿ ಹಿನ್ನಲೆಯಲ್ಲಿ ದೇವೇಗೌಡರ ಜತೆಗೆ ಚರ್ಚೆ ನಡೆಸಿರುವ ಕುಮಾರಸ್ವಾಮಿಗೆ, ಯಾವುದೇ ತಕರಾರು ಇಲ್ಲದೇ ಸರ್ಕಾರ ನಡೆಸು. ಬೇರೆ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ ಎಂದು ದೊಡ್ಡ ಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿರುವ ದೇವೇಗೌಡರು ಮನೆಯಲ್ಲಿಯೇ ಕುಳಿತು ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಜೆಡಿಎಸ್ ನಾಯಕರ ಜತೆಗೆ ಒಂದು ಸುತ್ತಿನ ಸಭೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.