ಬೆಂಗಳೂರು : ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಕಾಲೆಳೆದ ಮಾಜಿ ಸಂಸದೆ ರಮ್ಯಾ ಅವರಿಗೆ ಇದೀಗ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ಟಾಂಗ್ ನೀಡಿದೆ.
ಮಾಜಿ ಸಂಸದೆ ರಮ್ಯಾ 'ಕೇದಾರ್ ಜಾಧವ್ ಬೌಲಿಂಗ್ ಬಹಳ ನಿಧಾನವಿದೆ. ಆದರೂ ಅವರ ಬೌಲಿಂಗ್ ವೇಗ ನಮ್ಮ ದೇಶದ ರೂಪಾಯಿ ಮೌಲ್ಯಕ್ಕಿಂತ ಕಡಿಮೆಯೇನೂ ಆಗಿಲ್ಲ' ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ಕಾಲೆಳೆದಿದ್ದರು.
ಇದಕ್ಕೆ ಮರು ಟ್ವಿಟ್ ಮಾಡಿರುವ ರೀಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, 'ನಮಗೆ ಕೇದಾರ್ ಜಾಧವ್ ಬೌಲಿಂಗ್ ಬಗ್ಗೆ ಗೊತ್ತಿಲ್ಲ. ಆದರೆ, ನಿಮ್ಮ ಐಕ್ಯೂ ಮಾತ್ರ ಇಡೀ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನಕ್ಕಿಂತ ಕಳಪೆಯಾಗಿದೆ ಎಂಬುದಂತೂ ಗ್ಯಾರಂಟಿ' ರಮ್ಯಾ ಅವರ ಕಾಲೆಳೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.