Publish Date: Fri, 21 Sep 2018 (05:43 IST)
Updated Date: Fri, 21 Sep 2018 (07:30 IST)
ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನಿನ್ನೆ ಸಂಜೆ ಡಿಸ್ಚಾರ್ಜ್ ಆಗಿದ್ದಾರೆ.
ಹೈದರಾಬಾದ್ ನಿಂದ ಬೆಂಗಳೂರಿಗೆ ಬರುವಾಗ ವಿಮಾನದಲ್ಲಿ ನೀಡಿದ್ದ ಸ್ಯಾಂಡ್ ವಿಚ್ ಸೇವಿಸಿ ಡಿಕೆಶಿ ತೀವ್ರ ಹೊಟ್ಟೆನೋವಿಗೆ ಒಳಗಾಗಿದ್ದರು. ಮನೆಯಲ್ಲಿಯೇ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖರಾಗದ ಕಾರಣ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಮೊನ್ನೆ ದಾಖಲಾಗಿದ್ದರು.
ನಿನ್ನೆ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೂ ನಾನೇ ಡಿಸ್ಚಾರ್ಜ್ ಆದೆ. ಪಾಪ ನನ್ನಿಂದಾಗಿ ಆಸ್ಪತ್ರೆಯವರಿಗೆ ತೊಂದರೆಯಾಯಿತು. ಅಲ್ಲಿ ಇರುವಷ್ಟು ಸಮಯ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು ಎಂದು ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Fri, 21 Sep 2018 (05:43 IST)
Updated Date: Fri, 21 Sep 2018 (07:30 IST)