ಡೆಹ್ರಾಡೂನ್ : ಕೇವಲ 500 ರೂ.ಗಳನ್ನು ನೀಡಿದರೆ ಒಂದು ರಾತ್ರಿ ಜೈಲಿನಲ್ಲಿ ಕೈದಿಗಳಂತೆ ಇರಲು ಉತ್ತರಾಖಂಡದ ಜೈಲು ಆಡಳಿತವು ವಿಶಿಷ್ಟ ರೀತಿಯ ಆಫರ್ ನೀಡಿದೆ.
ಕೆಲವರಿಗೆ ಜ್ಯೋತಿಷ್ಯ ಕೇಳುವ ರೂಢಿ ಇರುತ್ತೆ. ಕೆಲವೊಮ್ಮೆ ಜ್ಯೋತಿಷಿಗಳು ಬಂಧನದ ಭೀತಿ ಇದೆ ಎಂದು ಹೇಳುತ್ತಾರೆ. ಇದರಿಂದಾಗಿ ಪರಿಹಾರಕ್ಕಾಗಿ ಅನೇಕ ರೀತಿಯ ಖರ್ಚನ್ನು ಮಾಡುತ್ತಾರೆ.
ಹೋಮ, ಹವನವನ್ನು ಮಾಡುತ್ತಾರೆ. ಆದರೆ ಉತ್ತರ ಖಂಡದ ಹಲ್ದ್ವಾನಿ ಆಡಳಿತವು ಈ ರೀತಿ ತೊಂದರೆ ಅನುಭವಿಸುವವರಿಗೆಂದೇ ಅಥವಾ ವಿಚಿತ್ರ ಆಸೆ ಹೊಂದಿದವರಿಗೆ ಅದನ್ನು ತೀರಿಸಲು ಅನುವು ಮಾಡಿಕೊಟ್ಟಿದೆ.
ಹಲ್ದ್ವಾನಿ ಜೈಲನ್ನು 1903ರಲ್ಲಿ ನಿರ್ಮಿಸಲಾಗಿದೆ. ಹಿರಿಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಜೈಲಿನಲ್ಲಿ ಉಳಿದುಕೊಳ್ಳಬಹುದು. ಕೈದಿಗಳು ಧರಿಸುವಂತಹ ಬಟ್ಟೆ ಹಾಗೂ ಕಾರಾಗೃಹದಲ್ಲಿ ನೀಡುವ ಊಟವನ್ನು ನೀಡಲಾಗುತ್ತದೆ.