Publish Date: Fri, 02 Sep 2022 (10:16 IST)
Updated Date: Fri, 02 Sep 2022 (10:53 IST)
ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳು ರಾತ್ರಿಯಿಡೀ ನಿದ್ರೆ ಇಲ್ಲದೇ ಜೈಲಿನಲ್ಲಿ ಕಳೆದರು.
ಗುರುವಾರ ರಾತ್ರಿ ಶ್ರೀಗಳು ನ್ಯಾಯಾಂಗ ಬಂಧನಕ್ಕೊಳಗಾದರು. ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆ ತಡರಾತ್ರಿ ಜೈಲಿಗೆ ಸೇರಿದರು. ಇದೀಗ ತಡರಾತ್ರಿಯಿಂದ ಜೈಲಿನಲ್ಲಿರುವ ಶ್ರೀಗಳು ರಾತ್ರಿಯಿಡೀ ನಿದ್ದೆ ಇಲ್ಲದೇ, ಚಿಂತಾಕ್ರಾಂತರಾಗಿದ್ದರು.
ಬೆಳಗ್ಗೆಯಾದ ಕೂಡಲೇ ವಿಶ್ರಾಂತಿ ಮುಗಿಸಿ ಎದ್ದು, ನಂತರ ಧ್ಯಾನದಲ್ಲಿ ಸ್ವಾಮೀಜಿ ನಿರತರಾಗಿದ್ದರು. ಬಳಿಕ ಇತರ ಕೈದಿಗಳಿಗೆ ನೀಡುವಂತೆ ಜೈಲು ಸಿಬ್ಬಂದಿ ಶ್ರೀಗಳಿಗೂ ಸಹ ಚಹಾ ನೀಡಿದರು.
ತಡರಾತ್ರಿ 2:50ರ ಸುಮಾರಿಗೆ ಬಂಧಿತರಾದ ಶ್ರೀಗಳು ಬೆಳಗ್ಗೆ 6 ಗಂಟೆಗೆ ಎದ್ದರು. ನಂತರ ಮುರುಘಾಶ್ರೀಗೆ ಮೆಡಿಸಿನ್ ಮತ್ತು ಟೂತ್ ಪೇಸ್ಟ್, ಬ್ರಶ್ ಅನ್ನು ವಕೀಲರು ನೀಡಿ ಬಂದರು.