ಮಂಡ್ಯ: ವಿವೇಕಾನಂದ ನಗರದ ಒಳಚರಂಡಿ ಕಾಮಗಾರಿಗಾಗಿ ಮೂಡಾಗೆ ಬಂದಿದ್ದ 5 ಕೋಟಿ ರೂ. ಹಣವನ್ನು ಅಲಹಾಬಾದ್ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು.
ಹಣವನ್ನು ತಮ್ಮ ಬ್ಯಾಂಕ್‌ನಲ್ಲಿ ಇಡುವಂತೆ ಇಂಡಿಯನ್ ಬ್ಯಾಂಕ್‌ನವರು ಮುಡಾಗೆ ಮನವಿ ಮಾಡಿ ಪತ್ರ ಬರೆದಿದ್ದರು.
ಮನವಿ ಪುರಸ್ಕರಿಸಿದ ಮೂಡಾ ಅಲಹಾಬಾದ್ ಬ್ಯಾಂಕ್‌ನಲ್ಲಿದ್ದ ಹಣವನ್ನು ಫೆಬ್ರವರಿ ತಿಂಗಳಿನಲ್ಲಿ ಇಂಡಿಯನ್ ಬ್ಯಾಂಕ್‌ಗೆ ಐದು ಚೆಕ್‌ಗಳ ಮೂಲಕ ವರ್ಗಾಯಿಸಿತ್ತು.
ಈ ಹಣಕ್ಕೆ ಇಂಡಿಯನ್ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಂತೆ ನಕಲಿ ಬಾಂಡ್‌ಗಳನ್ನು ಸೃಷ್ಟಿಸಿದ್ದರು. ಕೆಲವು ತಿಂಗಳುಗಳ ನಂತರ ಕಾಮಗಾರಿಗಾಗಿ ಠೇವಣಿ ಹಣ ಪಡೆಯುವಂತೆ ಜಿಲ್ಲಾಧಿಕಾರಿಗಳು ಮುಡಾ ಆಯುಕ್ತರಿಗೆ ಸೂಚಿಸಿದಾಗ ಹಣ ಗೋಲ್‌ಮಾಲ್ ಆಗಿರುವ ಬಗ್ಗೆ ಶಿವರಾಮು ಬ್ಯಾಂಕ್‌ನ ಹಿಂದಿನ ಮ್ಯಾನೆಜರ್ ರಾಮಸ್ವಾಮಿ ಹಾಗೂ ಹಾಲಿ ಮ್ಯಾನೇಜರ್ ಕುಮಾರ್ ನಾಯಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಿದು. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐದು ಮಂದಿ ಅಪರಾಧಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ, ತಲಾ ಒಂದೊಂದು ಕೋಟಿಯಂತೆ ಐದು ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ..