Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಇಂದು ಬೆಳ್ಳಂ ಬೆಳಿಗ್ಗೆಯೇ ಬಾಕ್ಸರ್ ಲೊವ್ಲಿನಾ ಭಾರತಕ್ಕೆ ಎರಡನೇ ಪದಕ ಗೆಲ್ಲುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದರ ಜೊತೆಗೇ ಈಗ ಆರ್ಚರಿ ತಾರೆ ದೀಪಿಕಾ ಕುಮಾರಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ದೀಪಿಕಾ ಬೆಳಗ್ಗೆ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದ ಪ್ರಿಕ್ವಾರ್ಟರ್ ಫೈನಲ್ ನಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ಈ ಪಂದ್ಯ ಇದೀಗ 11.30 ಕ್ಕೆ ನಡೆಯಲಿದ್ದು, ದೀಪಿಕಾ ಮೇಲೆ ಅಪಾರ ಭರವಸೆಯಿದೆ.
ಕ್ವಾರ್ಟರ್ ಫೈನಲ್ ನಲ್ಲಿ ದೀಪಿಕಾ ದಕ್ಷಿಣ ಕೊರಿಯಾದ ಅನ್ ಸ್ಯಾನ್ ಜೊತೆ ಸೆಣಸಾಡಲಿದ್ದಾರೆ. ವಿಶೇಷವೆಂದರೆ ದೀಪಿಕಾ ಪತಿ ಅತನು ದಾಸ್ ಕೂಡಾ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.