Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೊಲೊಂಬೋ: ಟಿ20 ಸರಣಿ ಗೆಲುವಿನ ಬಳಿಕ ಶ್ರೀಲಂಕಾ ನಾಯಕ ದಸನು ಶಣಕ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಗೆ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಕಳೆದ ಎರಡು ಪಂದ್ಯಗಳನ್ನು ಟೀಂ ಇಂಡಿಯಾ ಕೊರೋನಾ ಒತ್ತಡದ ನಡುವೆಯೇ ಆಡಿತ್ತು. ಕೃನಾಲ್ ಪಾಂಡ್ಯ ಕೊರೋನಾ ಸೋಂಕಿತರಾಗಿದ್ದರು. ಪ್ರಮುಖ ಆಟಗಾರರು ಕ್ವಾರಂಟೈನ್ ಗೊಳಗಾಗಿದ್ದರು.
ಈ ಒತ್ತಡದ ನಡುವೆಯೂ ಸರಣಿ ರದ್ದುಗೊಳಿಸದೇ ಆಟ ಮುಂದುವರಿಸಲು ಒಪ್ಪಿ ಆಡಿದ್ದಕ್ಕೆ ಧವನ್ ಮತ್ತು ದ್ರಾವಿಡ್ ಗೆ ಲಂಕಾ ನಾಯಕ ವಿಶೇಷವಾಗಿ ಪಂದ್ಯದ ಬಳಿಕ ಧನ್ಯವಾದ ಸಲ್ಲಿಸಿದ್ದಾರೆ. ಅತ್ತ ಶಿಖರ್ ಧವನ್ ಕೂಡಾ ಈ ಸರಣಿಯಲ್ಲಿ ಕೊರೋನಾ ಒತ್ತಡದ ನಡುವೆಯೂ ಮಾನಸಿಕ ಸ್ಥೈರ್ಯ ತೋರಿದ ತಮ್ಮ ಹುಡುಗರನ್ನು ಅಭಿನಂದಿಸಿದ್ದಾರೆ.