Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಗು ನಗುತ್ತಲೇ ಸೋಲು ಸ್ವೀಕರಿಸಿ ವಿದಾಯ ಹೇಳಿದ ಮೇರಿ ಕೋಮ್

ನಗು ನಗುತ್ತಲೇ ಸೋಲು ಸ್ವೀಕರಿಸಿ ವಿದಾಯ ಹೇಳಿದ ಮೇರಿ ಕೋಮ್
ಟೋಕಿಯೋ , ಗುರುವಾರ, 29 ಜುಲೈ 2021 (16:37 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಗೆಲ್ಲುವ ಬಾಕ್ಸರ್ ಮೇರಿ ಕೋಮ್ ಕನಸು ಭಗ್ನವಾಗಿದೆ. ಇಂದಿನ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ಆಟಗಾರ್ತಿ ವೆಲನ್ಷಿಯಾ ವಿರುದ್ಧ ಭಾರತದ ಹಿರಿಯ ತಾರೆ ಮೇರಿ 3-2 ಅಂತರದಿಂದ ಸೋಲು ಅನುಭವಿಸಿದರು.


38 ವರ್ಷದ ಮೇರಿಗೆ ಇದು ಕೊನೆಯ ಒಲಿಂಪಿಕ್ಸ್. ಈ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲಬೇಕೆಂದು ಕನಸು ಹೊತ್ತಿದ್ದ ಆಕೆಗೆ ಬಹುಶಃ ವಯಸ್ಸೇ ಅಡ್ಡಿಯಾಗಿದೆ. ಮೊದಲು ಸುತ್ತಿನಲ್ಲಿ ಉತ್ಸಾಹದಿಂದ ಆಡಿದ ಮೇರಿ ಕೊನೆ ಕೊನೆಗೆ ತೀರಾ ಸುಸ್ತಾದವರಂತೆ ಕಂಡರು.

ಅಂತಿಮವಾಗಿ ಕೊಲಂಬಿಯಾ ಆಟಗಾರ್ತಿಯ ಎದುರು ಸೋತಾಗ ಅದನ್ನು ನಗು ನಗುತ್ತಲೇ ಸ್ವೀಕರಿಸಿ ಎಲ್ಲರಿಗೂ ವಂದಿಸಿ ವಿದಾಯ ಹೇಳಿದರು. ಅವರನ್ನು ಕೊನೆಯ ಬಾರಿಗೆ ಒಲಿಂಪಿಕ್ಸ್ ಕಣದಲ್ಲಿ ನೋಡಿದ ಅಭಿಮಾನಿಗಳೂ ಭಾವುಕರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಒಲಿಂಪಿಕ್ಸ್​: ಹಾಲಿ ಚಾಂಪಿಯನ್ ಗೆ ಶಾಕ್ ನೀಡಿದ ಭಾರತ ಹಾಕಿ ತಂಡ