ಸಿಹಿ ಪರೋಟಾ ಸವಿದು ನೋಡಿ..!!

ನಾಗಶ್ರೀ ಭಟ್
ಮಂಗಳವಾರ, 13 ಫೆಬ್ರವರಿ 2018 (16:17 IST)
ದಿನವೂ ಒಂದೇ ರೀತಿಯ ಚಪಾತಿ, ಪರೋಟಾ, ದೋಸೆಗಳನ್ನು ತಿಂದು ಬೇಸರವಾದರೆ ಅಥವಾ ಬೆಳಿಗ್ಗೆಯೇ ಸಿಹಿಯನ್ನು ತಿನ್ನಬೇಕೆನಿಸಿದರೆ ಈ ಸಿಹಿ ಪರೋಟಾವನ್ನು ಮಾಡಿನೋಡಿ. ಇದರಲ್ಲಿ ಅತಿಯಾದ ಸಿಹಿಯೂ ಇರುವುದಿಲ್ಲ. ಪಿಸ್ತಾ, ಬಾದಾಮಿ, ಗೋಡಂಬಿಗಳನ್ನು ಬಳಸುವುದರಿಂದ ರುಚಿಯಾಗಿಯೂ ಇರುತ್ತದೆ ಮತ್ತು ಹೆಚ್ಚಿನ ಪೌಷ್ಟಿಕಾಂಶಗಳೂ ಲಭ್ಯವಿರುತ್ತವೆ. ಆದ್ದರಿಂದ ಅಪರೂಪಕ್ಕೊಮ್ಮೆ ಈ ಸಿಹಿ ಪರೋಟಾವನ್ನು ಮಾಡಿ ಸವಿಯಬಹುದು. ಈ ಸಿಹಿ ಪರೋಟಾವನ್ನು ಮಾಡುವ ಸರಳ ವಿಧಾನವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
 
ಪಿಸ್ತಾ - 2/6 ಕಪ್
ಗೋಡಂಬಿ - 2/6 ಕಪ್
ಬಾದಾಮಿ - 2/6
ಏಲಕ್ಕಿ - 3-4
ಕಾಯಿತುರಿ - 1/4 ಕಪ್
ಸಕ್ಕರೆ - 1/2 ಕಪ್
ಗೋಧಿ ಹಿಟ್ಟು - 2 ಕಪ್
ತುಪ್ಪ - ಸ್ವಲ್ಪ
ಉಪ್ಪು - ರುಚಿಗೆ
 
ಮಾಡುವ ವಿಧಾನ:
 
ಮೊದಲಿಗೆ ಗೋಧಿಹಿಟ್ಟನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ರುಚಿಗೆತಕ್ಕಷ್ಟು ಉಪ್ಪು, 2 ಚಮಚ ಸಕ್ಕರೆ, 1 ಚಮಚ ತುಪ್ಪ ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಚೆನ್ನಾಗಿ ಕಲಸಿ. ಕಲಸಿದ ಹಿಟ್ಟನ್ನು 1 ಗಂಟೆ ಹಾಗೆಯೇ ಬಿಡಿ.
 
ಪಿಸ್ತಾ, ಬಾದಾಮಿ, ಗೋಡಂಬಿ, ಕಾಯಿತುರಿ, ಏಲಕ್ಕಿ ಮತ್ತು ಸಕ್ಕರೆಯನ್ನು ಮಿಕ್ಸಿಜಾರ್‌ನಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಕಲಸಿಟ್ಟ ಗೋಧಿಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿಕೊಂಡು ಮಧ್ಯಮಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಒಂದೊಂದೇ ಉಂಡೆಗಯನ್ನು ತೆಗೆದುಕೊಂಡು ಸ್ವಲ್ಪ ಲಟ್ಟಿಸಿ ಅದರ ಮಧ್ಯ 2 ಚಮಚ ರುಬ್ಬಿದ ಮಿಶ್ರಣವನ್ನು ಹಾಕಿ ತುಂಬಿಕೊಳ್ಳಿ. ಹೀಗೆ ಹೂರಣವನ್ನು ತುಂಬಿದ ಉಂಡೆಗಳನ್ನು ಸ್ವಲ್ಪ ಗೋಧಿಹಿಟ್ಟಿನಲ್ಲಿ ಹೊರಳಿಸಿ ಚಪಾತಿಯಂತೆ ಲಟ್ಟಿಸಿ. ನಂತರ ಅವುಗಳನ್ನು ಒಂದೊಂದಾಗಿ ಕಾದ ತವಾದ ಮೇಲೆ ಹಾಕಿ 1 ಚಮಚ ತುಪ್ಪವನ್ನು ಸವರಿ ಎರಡೂ ಕಡೆ ಕೆಂಪಗಾಗುವವರೆಗೆ ಚೆನ್ನಾಗಿ ಬೇಯಿಸಿದರೆ ಸಿಯಾದ ಪರೋಟಾ ರೆಡಿ. ನೀವೂ ಒಮ್ಮೆ ಮಾಡಿ ಸವಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಕಾಲಿನ ಮಾಂಸಖಂಡಗಳು ನೋವಾಗುತ್ತಿದೆಯಾ, ಇದಕ್ಕೆ ಕಾರಣ ಇಲ್ಲಿದೆ

ಮುಟ್ಟು ತಡವಾಗಿ ಆಗ್ತಿದೆಯಾ, ಇದಕ್ಕೆ ಕಾರಣಗಳು ಹೀಗಿರಬಹುದು

ಮುಂದಿನ ಸುದ್ದಿ
Show comments