ಬೇಕಾಗುವ ಸಾಮಗ್ರಿಗಳು
1/4 ಕಪ್ ತೊಗರಿ ಬೇಳೆ
2 ಸಣ್ಣದಾಗಿ ಹೆಚ್ಚಿದ ಟೊಮ್ಯಾಟೊ
1 ಸಣ್ಣ ಗಾತ್ರದ ಹುಣಿಸೇಹಣ್ಣು
1 - 2 ಚಮಚ ಬೆಲ್ಲ (ನಿಮ್ಮ ರುಚಿಗೆ ತಕ್ಕಂತೆ)
ಉಪ್ಪು
2 ಹಸಿರು ಮೆಣಸಿನಕಾಯಿ
2 ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು
2 ಚಮಚ ರಸಂ ಪುಡಿ
ಚಿಟಿಕೆ ಅರಿಶಿನ ಪುಡಿ
ಎಣ್ಣೆ/ತುಪ್ಪ
1/2 ಚಮಚ ಸಾಸಿವೆ
1/2 ಚಮಚ ಜೀರಿಗೆ
ಒಂದು ದೊಡ್ಡ ಚಿಟಿಕೆ ಇಂಗು
ಮಾಡುವ ವಿಧಾನ -
- ಕುಕ್ಕರ್‌ನಲ್ಲಿ ತೊಳೆದ ತೊಗರಿ ಬೇಳೆ, 1 ಕಪ್ ನೀರು, 1 ಚಮಚ ಎಣ್ಣೆ, ಸ್ವಲ್ಪ ಅರಿಶಿನ ಸೇರಿಸಿ, 2 ಸೀಟಿ ಬರುವ ತನಕ ಬೇಯಿಸಿ
- ಬೆಂದ ನಂತರ ಅದಕ್ಕೆ ಟೊಮ್ಯಾಟೊ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಸೇರಿಸಿ ಮತ್ತೆ 2 ಸೀಟಿ ಬರುವ ತನಕ ಬೇಯಿಸಿ
- ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಹುಣಸೇಹಣ್ಣಿನ ರಸ, ಕೊತ್ತಂಬರಿ ಸೊಪ್ಪು, ರಸಂ ಪುಡಿ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ
- ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ/ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ,ಇಂಗು , ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆಯನ್ನು ಸಿದ್ದ ಪಡಿಸಿಕೊಳ್ಳಿ
- ಈಗ ಈ ಒಗ್ಗರಣೆಯನ್ನು ಕುದಿಸಿದ ರಸಂಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಉಡುಪಿ ಶೈಲಿಯ ರುಚಿಕರ ರಸಂ ಸಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.