Select Your Language

Notifications

webdunia
webdunia
webdunia
webdunia

ಉಡುಪಿ ಶೈಲಿಯ ಅನಾನಸ್ ಸಾಸಿವೆ ಮಾಡಿ ನೋಡಿ

ಉಡುಪಿ ಶೈಲಿ
ಸರಳವಾಗಿ ಮನೆಯಲ್ಲಿಯೇ ರುಚಿಕರವಾದ ಉಡುಪಿ ಶೈಲಿಯಲ್ಲಿ ಅನಾನಸ್ ಹಣ್ಣಿನ ಸಾಸಿವೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ
ಬೇಕಾಗುವ ಸಾಮಗ್ರಿಗಳು
 
2-3 ಕೆಂಪು ಮೆಣಸಿನಕಾಯಿ
1/2 ಕಪ್ ಕಾಯಿ ತುರಿ
1 ಚಮಚ ಸಾಸಿವೆ ಕಾಳು
1 ಚಮಚ ಬೆಲ್ಲ
1/2 ಚಮಚ ಉಪ್ಪು
1 ಕಪ್ ಅನಾನಸ್ ಹಣ್ಣು (ಸ್ವಲ್ಪ ರುಬ್ಬಿರಬೇಕು)
 
ಮಾಡುವ ವಿಧಾನ
* ಕೆಂಪು ಮೆಣಸಿನಕಾಯಿ, ಕಾಯಿ ತುರಿ, ಸಾಸಿವೆ ಕಾಳು, ಬೆಲ್ಲ, ಮ್ತತು ಉಪ್ಪು ಹಾಕಿ ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
 
* ಒಂದು ಪಾತ್ರೆಯಲ್ಲಿ ರುಬ್ಬಿದ ಮಿಶ್ರಣವನ್ನು ತೆಗೆದುಕೊಂಡು ಅದರಲ್ಲಿ ಅನಾನಸ್ ಹಣ್ಣನ್ನು ಹಾಕಿ ಮಿಶ್ರಣ ಮಾಡಿದರೆ ಅನಾನಸ್ ಸಾಸಿವೆ ಅನ್ನದ ಜೊತೆ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ತೊನ್ನಿನ ನಿವಾರಣಾ ಮಾರ್ಗಗಳೇನು ?