Webdunia - Bharat's app for daily news and videos

Install App

ಸುಲಭವಾಗಿ ಮಾಡಿ ರವಾ ಇಡ್ಲಿ

Webdunia
ಬುಧವಾರ, 29 ಜುಲೈ 2020 (08:24 IST)
ಬೆಂಗಳೂರು : ರವಾ ಇಡ್ಲಿ ಇದು ಆರೋಗ್ಯಕರವಾದ ತಿಂಡಿಯಾಗಿದ್ದು ಬೆಳಗಿನ ಉಪಹಾರಕ್ಕೆ ಅತ್ಯಂತ ಸೂಕ್ತ. ಇದನ್ನು ಮಕ್ಕಳು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಚಟ್ನಿ ಮತ್ತು ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ಸಣ್ಣ ರವಾ, ಮೊಸರು1/4 ಕಪ್, ಹಸಿಮೆಣಸಿನ ಕಾಯಿ  3, ಹಸಿ ಶುಂಠಿ, ಕ್ಯಾರೆಟ್ ತುರಿ ¼ ಕಪ್, ಸಾಸಿವೆ ¼  ಚಮಚ, ಕರಿಬೇವು, ಗೋಡಂಬಿ ಸ್ವಲ್ಪ, ಉದ್ದೀನಬೇಳೆ-1 ಚಮಚ, ಇಂಗು ಚಿಟಿಕೆ, ಎಣ್ಣೆ 1 ಚಮಚ, ತುಪ್ಪ ½  ಚಮಚ, ಉಪ್ಪು.

ಮಾಡುವ ವಿಧಾನ : ಮೊದಲು ರವೆಯನ್ನು ಹುರಿದುಕೊಳ್ಳಿ. ಅದಕ್ಕೆ  ಉಪ್ಪು, ಮೊಸರು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಗಂಟಿಲ್ಲದಂತೆ ಕಲಸಿ  ಇಡ್ಲಿ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ. ಚಿಕ್ಕ ಪಾತ್ರೆಗೆ ತುಪ್ಪ ಹಾಕಿ ನಂತರ ಸಾಸಿವೆ, ಕರಿಬೇವು, ಉದ್ದಿನಬೇಳೆ, ಇಂಗು, ಗೋಡಂಬಿ, ಶುಂಠಿ ಹಾಕಿ ಅದನ್ನು ರವಾ ಮಿಶ್ರಣಕ್ಕೆ ಸೇರಿಸಿ. ಆಮೇಲೆ ಅದಕ್ಕೆ ತುರಿದಿಟ್ಟುಕೊಂಡ ಕ್ಯಾರೆಟ್ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಇಡ್ಲಿ ತಯಾರಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments