Publish Date: Wed, 29 Jul 2020 (07:47 IST)
Updated Date: Wed, 29 Jul 2020 (07:49 IST)
ಬೆಂಗಳೂರು : ಕೆಲವರಿಗೆ ಜಾತಕದಲ್ಲಿ ಕಾಳಸರ್ಪದೋಷವಿರುತ್ತದೆ. ಇದರಿಂದ ಅವರು ಏಳಿಗೆ ಹೊಂದಲು ಸಾಧ್ಯವಾಗುವುದಿಲ್ಲ. ಈ ಕಾಳಸರ್ಪದೋಷ ಪರಿಹಾರವಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ.
ಪ್ರತಿದಿನ ದೀಪಾರಾಧನೆ ಮಾಡುವಾಗ ದೀಪಗಳಿಗೆ ಎಣ್ಣೆ ಹಾಕಿ ಬತ್ತಿ ಹಾಕಬೇಕು. ಹಾಗೇ ಸೋಮವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ ದೀಪಾರಾಧನೆ ಮಾಡಬೇಕು. ಮಂಗಳವಾರದಂದು 3 ಬತ್ತಿಗಳಿಂದ 1 ಬತ್ತಿ ಮಾಡಿ , ಬುಧವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ, ಗುರುವಾರದಂದು 6 ಬತ್ತಿಗಳಿಂದ 1 ಬತ್ತಿ ಮಾಡಿ, ಶುಕ್ರವಾರದಂದು 5 ಬತ್ತಿಗಳಿಂದ 1 ಬತ್ತಿ ಮಾಡಿ, ಶನಿವಾರದಂದು 9ಬತ್ತಿಗಳಿಂದ 1 ಬತ್ತಿ ಮಾಡಿ, ಭಾನುವಾರದಂದು12 ಬತ್ತಿಗಳಿಂದ 1 ಬತ್ತಿ ಮಾಡಿ ಅರಳಿ ಎಲೆಗಳ ಮೇಲೆ ದೀಪವಿಟ್ಟು ದೀಪಾರಾಧನೆ ಮಾಡಬೇಕು.