Publish Date: Wed, 29 Jul 2020 (08:24 IST)
Updated Date: Wed, 29 Jul 2020 (08:25 IST)
ಬೆಂಗಳೂರು : ರವಾ ಇಡ್ಲಿ ಇದು ಆರೋಗ್ಯಕರವಾದ ತಿಂಡಿಯಾಗಿದ್ದು ಬೆಳಗಿನ ಉಪಹಾರಕ್ಕೆ ಅತ್ಯಂತ ಸೂಕ್ತ. ಇದನ್ನು ಮಕ್ಕಳು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಚಟ್ನಿ ಮತ್ತು ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ಸಣ್ಣ ರವಾ, ಮೊಸರು1/4 ಕಪ್, ಹಸಿಮೆಣಸಿನ ಕಾಯಿ 3, ಹಸಿ ಶುಂಠಿ, ಕ್ಯಾರೆಟ್ ತುರಿ ¼ ಕಪ್, ಸಾಸಿವೆ ¼ ಚಮಚ, ಕರಿಬೇವು, ಗೋಡಂಬಿ ಸ್ವಲ್ಪ, ಉದ್ದೀನಬೇಳೆ-1 ಚಮಚ, ಇಂಗು ಚಿಟಿಕೆ, ಎಣ್ಣೆ 1 ಚಮಚ, ತುಪ್ಪ ½ ಚಮಚ, ಉಪ್ಪು.
ಮಾಡುವ ವಿಧಾನ : ಮೊದಲು ರವೆಯನ್ನು ಹುರಿದುಕೊಳ್ಳಿ. ಅದಕ್ಕೆ ಉಪ್ಪು, ಮೊಸರು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಗಂಟಿಲ್ಲದಂತೆ ಕಲಸಿ ಇಡ್ಲಿ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ. ಚಿಕ್ಕ ಪಾತ್ರೆಗೆ ತುಪ್ಪ ಹಾಕಿ ನಂತರ ಸಾಸಿವೆ, ಕರಿಬೇವು, ಉದ್ದಿನಬೇಳೆ, ಇಂಗು, ಗೋಡಂಬಿ, ಶುಂಠಿ ಹಾಕಿ ಅದನ್ನು ರವಾ ಮಿಶ್ರಣಕ್ಕೆ ಸೇರಿಸಿ. ಆಮೇಲೆ ಅದಕ್ಕೆ ತುರಿದಿಟ್ಟುಕೊಂಡ ಕ್ಯಾರೆಟ್ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಇಡ್ಲಿ ತಯಾರಿಸಿ.