Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೆಪ್ಪರ್ ಸಿಗಡಿ ಮಸಾಲಾ

ಪೆಪ್ಪರ್ ಸಿಗಡಿ ಮಸಾಲಾ

ಅತಿಥಾ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (15:51 IST)
ಬೇಕಾಗುವ ಸಾಮಗ್ರಿಗಳು
ಸೀಗಡಿ - 250 ಗ್ರಾಂ
ಪೆಪ್ಪರ್ ಪುಡಿ - 1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಖಾರ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಅರಿಶಿನ ಪುಡಿ - ಅರ್ಧ ಚಮಚ
ನಿಂಬೆ ರಸ - 2 ಚಮಚ
ಈರುಳ್ಳಿ - 1 ಸಣ್ಣ
ಹಸಿರು ಮೆಣಸಿನಕಾಯಿಗಳು - 2 
ಕರಿಬೇವು
ತೆಂಗಿನ ಎಣ್ಣೆ
ಉಪ್ಪು
ಮಾಡುವ ವಿಧಾನ
 
- ಅರಿಶಿನ ಪುಡಿ, ಖಾರ ಪುಡಿ, ಕೊತ್ತಂಬರಿ ಪುಡಿ, ಶುಂಠಿಯ ಬೆಳ್ಳುಳ್ಳಿ ಪೇಸ್ಟ್, ಪೆಪ್ಪರ್ ಪುಡಿ, ಉಪ್ಪು ಮತ್ತು ನಿಂಬೆ ರಸದೊಂದಿಗೆ ಸ್ವಚ್ಛಗೊಳಿಸಿದ 
 
ಸೀಗಡಿಗಳನ್ನು ಮಿಶ್ರಣ ಮಾಡಿ. ಅದನ್ನು ಕೆಲವು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
- ಈಗ ಈ ಮ್ಯಾರಿನೇಟ್ ಮಾಡಿದ ಸೀಗಡಿಗಳು ಮತ್ತು 1/4 ಕಪ್ ನೀರನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ. ಎಲ್ಲಾ ನೀರು ಒಣಗುವ ತನಕ ಬೇಯಿಸಿ.
- ಈಗ ತವಾಗೆ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಈರುಳ್ಳಿ, ಹಸಿರು ಮೆಣಸಿನಕಾಯಿಗಳು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ 
 
ಹುರಿಯಿರಿ.
- ಇದಕ್ಕೆ, ಬೇಯಿಸಿದ ಸೀಗಡಿಗಳನ್ನು ಹಾಕಿ 1 ಚಮಚ ಪೆಪ್ಪರ್ ಪುಡಿ ಸೇರಿಸಿ. ಸಾಧಾರಣ ಉರಿಯಲ್ಲಿ 8 ನಿಮಿಷ ಬೇಯಿಸಿ.
- ಇದು ಅನ್ನ ಅಥವಾ ದೋಸದೊಂದಿಗೆ ಬಿಸಿಯಾಗಿ ಸೇವಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆ ಹಣ್ಣಿನ ಸಿಪ್ಪೆಯ ಈ ಉಪಯೋಗ ತಿಳಿದರೆ ಬಿಸಾಕಲಾರಿರಿ!