ಬಸವಕಲ್ಯಾಣ: ಎಳ್ಳ ಅಮಾವಾಸ್ಯೆ ಪ್ರಯುಕ್ತ ವನ ಭೋಜನಕ್ಕೆಂದು ಹೊಲಕ್ಕೆ ಹೋಗಿದ್ದ ಒಬ್ಬ ಬಾಲಕ, ಮೂವರು ಬಾಲಕಿಯರು ಸೇರಿ ನಾಲ್ವರು ನೀರುಪಾಲಾದ ಘಟನೆಯೊಂದು ಕೋಹಿನೂರ ಗ್ರಾಮದಲ್ಲಿ ನಡೆದಿದೆ.
ಕೋಹಿನೂರ ಪಹಾಡದ ಬಾಲಕಿಯರಾದ ತನಾಜಬಾನು ಲಾಲ್ ಮಹ್ಮದ(18),ಇಸ್ರಾತ ಇಸ್ಮಾಯಿಲ್‌ಖುರೇಶಿ (15), ಜಿಯಾಬಾನು ಅಬ್ದುಲ್ ಸತ್ತಾರ (17) ಹಾಗೂ ಒರ್ವ ಬಾಲಕ ತಬ್ರೇಜ್ ನಾಜೀರಸಾಬ್(10) ಮೃತಪಟ್ಟವರು.
ಕೆರೆಯಲ್ಲಿ ಮೀನುಗಳಿಗೆ ಆಹಾರ ಹಾಕಲು ಬಳಸುವ ಪೈಡಲ್ ಬೋಟು (ತೆಪ್ಪ) ಇರುವುದನ್ನು ಗಮನಿಸಿ ಒಂಭತ್ತು ಜನ ಬೋಟು ಹತ್ತಿ ವಿಹಾರಕ್ಕೆಂದು ನೀರಿಗಿಳಿದಿದ್ದರು. ಆದರೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಕುಳಿತಿದ್ದರಿಂದ ಈ ಬೋಟು ನಿಯಂತ್ರಣ ಕಳೆದುಕೊಂಡ ಪಲ್ಪಿಯಾಗಿ ದುರಂತ ನಡೆದಿದೆ. ಐವರು ಈಜಿ ದಡ ಸೇರಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಕಾರ್ಯಾಚರಣೆ ನಡೆಸಿ ನಾಲ್ವರ ಶವಗಳನ್ನು ಮೇಲಕ್ಕೆತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ