ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಗೆ ಇಂದು ಚಾಲನೆ ಸಿಗಲಿದ್ದು, ತಮ್ಮ ಅಜ್ಜಿಯ ಹೆಸರಿನ ಕ್ಯಾಂಟೀನ್ ನಲ್ಲಿ ಮೊಮ್ಮಗ, ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ರಾಹುಲ್ ಗಾಂಧಿ ಭೋಜನ ಸವಿಲಿದ್ದಾರೆ.
ಬೆಂಗಳೂರಿನ ಅಶೋಕ ಪಿಲ್ಲಾರ್ ಬಳಿ ಕನಕನ ಪಾಳ್ಯ ಮುಖ್ಯ ರಸ್ಥೆಯಲ್ಲಿ ಇಂದಿರಾ ಕ್ಯಾಂಟೀಸ್ ನನ್ನು ರಾಹುಲ್ ಉದ್ಘಾಟಿಸಲಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಒಟ್ಟಾರೆ 198 ವಾರ್ಡ್ ಗಳಲ್ಲಿ ಅಗ್ಗದ ದರದ ಕ್ಯಾಂಟೀನ್ ಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಕ್ಯಾಂಟೀನ್ ಉದ್ಘಾಟನೆಯ ನಂತರ ರಾಹುಲ್ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಉಪಸ್ಥಿತರಲಿದ್ದಾರೆ.