ನಮ್ಮಲ್ಲಿ ಹಬ್ಬ ಹರಿದಿನಗಳಲ್ಲಿ ಸಿಹಿ ಪದಾರ್ಥಗಳನ್ನು ತಯಾರಿಸುವುದು ಸಾಮಾನ್ಯ ಅದರಲ್ಲೂ ಮಕ್ಕಳಿಗೆ ಲಡ್ಡುಗಳೆಂದರೆ ತುಂಬಾ ಇಷ್ಟ. ನಾವು ತಯಾರಿಸುವ ಲಡ್ಡುಗಳು ರುಚಿಯೊಂದಿಗೆ ಆರೋಗ್ಯಯುತವಾಗಿದ್ದರೆ ಮಕ್ಕಳು ಸ್ವಲ್ಪ ಜಾಸ್ತಿ ತಿಂದರು ಭಯವಿರುವುದಿಲ್ಲ. ಅಂತಹ ರುಚಿಕರ ಆರೋಗ್ಯಕರ ಲಡ್ಡುವನ್ನು ಹೇಗೆ ತಯಾರಿಸೋದು ಅನ್ನುವ ಕೂತುಹಲ ನಿಮಗಿದ್ದರೆ ಇಲ್ಲಿದೆ ಮಾಹಿತಿ.
1. ಓಟ್ಸ್ ಲಡ್ಡು
ಬೇಕಾಗುವ ಸಾಮಗ್ರಿಗಳು
1 ಕಪ್ ಓಟ್ಸ್
1 ಟೀ ಚಮಚ ಅಖ್ರೋಟ್
1 ಟೀ ಚಮಚ ಬಾದಾಮಿ
2 ಟೀ ಚಮಚ ಬಿಳಿ ಎಳ್ಳು
2 ಟೀ ಚಮಚ ತುಪ್ಪ
2-4 ಟೀ ಚಮಚ ಬೆಲ್ಲ
1/2 ಟೀ ಚಮಚ ಏಲಕ್ಕಿ ಪುಡಿ
2 ಟೀ ಚಮಚ ಹಾಲು
ಮಾಡುವ ವಿಧಾನ
ಒಂದು ಬಾಣಲೆಯಲ್ಲಿ 3 ನಿಮಿಷಗಳ ಕಾಲ ಓಟ್ಸ್ ಅನ್ನು ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಎಳ್ಳನ್ನು ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ನಂತರ ಖಾಲಿ ಪಾತ್ರೆಯಲ್ಲಿ ತುಪ್ಪ ಮತ್ತು ಬೆಲ್ಲವನ್ನು ಹಾಕಿ. ಬಿಸಿ ಮಾಡಿ, ಅದು ಗಟ್ಟಿಯಾಗದ ಹಾಗೆ ನೋಡಿಕೊಳ್ಳಿ ನಂತರ ಹುರಿದಿಟ್ಟುಕೊಂಡಿರುವ ಓಟ್ಸ್, ಎಳ್ಳನ್ನು ಹಾಕಿ ಅದಕ್ಕೆ ಅಖ್ರೋಟ್, ಬಾದಾಮಿ, ಏಲಕ್ಕಿ ಪುಡಿ, ಮತ್ತು ಹಾಲು ಹಾಕಿ ಚಿನ್ನಾಗಿ ಕಲಸಿ ಸ್ವಲ್ಪ ಸಮಯದ ನಂತರ ಅದನ್ನು ಉಂಡೆಯಾಕಾರದಲ್ಲಿ ಕಟ್ಟಿದರೆ ರುಚಿಕರ ಮತ್ತು ಆರೋಗ್ಯಕರ ಓಟ್ಸ್ ಲಡ್ಡು ರೆಡಿ.
2. ಖರ್ಜೂರದ ಲಡ್ಡು
ಬೇಕಾಗುವ ಸಾಮಗ್ರಿಗಳು
1 ಕಪ್ ಖರ್ಜೂರ (ಬೀಜ ರಹಿತ)
2 - 3 ಟೀ ಚಮಚ ಗೋಡಂಬಿ
2 - 3 ಟೀ ಚಮಚ ಬಾದಾಮಿ
2 - 3 ಟೀ ಚಮಚ ಪಿಸ್ತಾ
2 - 3 ಟೀ ಚಮಚ ಬಿಳಿ ಎಳ್ಳು
1/2 ಚಮಚ ಏಲಕ್ಕಿ ಪುಡಿ
1 ಟೀ ಚಮಚ ತುಪ್ಪ
1/4 ಕಪ್ ತೆಂಗಿನಕಾಯಿ ತುರಿ
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಗೋಡಂಬಿ, ಬಾದಾಮಿ, ಪಿಸ್ತಾ ಹಾಕಿ ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಎಳ್ಳನ್ನು ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ನಂತರ ಹುರಿದಿಟ್ಟುಕೊಂಡ ಡ್ರೈಫ್ರೂಟ್‌ಗಳನ್ನು ಒರಟಾಗಿ ಪುಡಿ ಮಾಡಿ. ಬೀಜ ತೆಗೆದ ಖರ್ಜೂರವನ್ನು ಒಮ್ಮೆ ತರಿತರಿಯಾಗಿ ಮಿಕ್ಸರ್‌ನಲ್ಲಿ ತಿರುಗಿಸಿ. ನಂತರ ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಖರ್ಜೂರವನ್ನು ಹಾಕಿ 5 ನಿಮಿಷಗಳ ಕಾಲ ಹುರಿಯಿರಿ. ಅದಕ್ಕೆ ಹುರಿದು ಪುಡಿ ಮಾಡಿದ ಡ್ರೈಫ್ರೂಟ್‌ಗಳನ್ನು ಹಾಕಿ ಚಿನ್ನಾಗಿ ಕಲಸಿ, ಬಿಸಿಯಾಗಿರುವಾಗಲೇ ಉಂಡೆ ಆಕಾರದಲ್ಲಿ ಕಟ್ಟಿದರೆ, ರುಚಿಕರ ಮತ್ತು ಆರೋಗ್ಯಕರ ಖರ್ಜೂರದ ಲಡ್ಡು ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.