Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾಂಸಹಾರಿಗಳಿಗಂತೂ ಈ ವಡಾ ಸಖತ್ ಇಷ್ಟವಾಗುತ್ತೆ!

ಮಾಂಸಹಾರಿಗಳಿಗಂತೂ ಈ ವಡಾ ಸಖತ್ ಇಷ್ಟವಾಗುತ್ತೆ!
ಬೆಂಗಳೂರು , ಶುಕ್ರವಾರ, 3 ಜನವರಿ 2020 (07:03 IST)
ಬೆಂಗಳೂರು : ಹೆಚ್ಚಾಗಿ ಫಿಶ್ ಅಡುಗೆ ರುಚಿಕರವಾಗಿರುವುದರಿಂದ ಅದನ್ನು ಮಾಂಸಾಹಾರಿಗಳು ತುಂಬಾ ಇಷ್ಟಪಡುತ್ತಾರೆ. ಇಂತಹ ರುಚಿಕರವಾದ ಫಿಶ್ ನಿಂದ ವಡಾ ಕೂಡ ಮಾಡಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.



ಬೇಕಾಗುವ ಸಾಮಾಗ್ರಿಗಳು:
ದೊಡ್ಡ ಗಾತ್ರದ ಮೀನು ½ ಕೆಜಿ, ಖಾರದ ಪುಡಿ 1 ½ ಚಮಚ, ಕಡಲೆ ಹಿಟ್ಟು 100ಗ್ರಾಂ, ಅರಿಶಿನ ಪುಡಿ ½ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ½ ಚಮಚ, ಗರಂ ಮಸಾಲ 1 ಚಮಚ, ಜೀರಿಗೆ ಪುಡಿ ½ ಚಮಚ, ನಿಂಬೆ ಹಣ್ಣು 1, ಸೋಂಪು 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.


ತಯಾರಿಸುವ ವಿಧಾನ:
ಮೀನನ್ನು ಕ್ಲೀನ್ ಮಾಡಿ ಅದಕ್ಕೆ ಅರಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ½ ಗಂಟೆ ಇಡಿ. ನಂತರ ಒಂದು ಪಾತ್ರೆಯಲ್ಲಿ  ಕಡಲೆ ಹಿಟ್ಟು, ಗರಂ ಮಸಾಲ ಪುಡಿ, ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ,ನಿಂಬೆರಸ ಹಾಕಿ  ಚೆನ್ನಾಗಿ ಕಲಸಿ ಅದಕ್ಕೆ ಮೀನನ್ನು ಹಾಕಿ ಮಿಕ್ಸ್ ಮಾಡಿ ಮತ್ತೆ  ½ ಗಂಟೆ ಇಡಿ. ಬಳಿಕ ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ ಅದು ಕಾದ ಮೇಲೆ ಈ ಮೀನನ್ನು ಹಾಕಿ ಡೀಪ್ ಪ್ರೈ ಮಾಡಿದರೆ ವಡಾ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಲ್ಲದ ವೇಳೆ ಪಲ್ಲಂಗ ಸುಖ ಕೊಡುವ ಆಂಟಿ