ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು.
ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಮಸಾಲಾ ಚಪಾತಿ ಟ್ರೈ ಮಾಡಬಹುದು. ನೀವು ಇಷ್ಟು ದಿನ ಮಾಡುತ್ತಿದ್ದ ಚಪಾತಿಗಿಂತ ವಿಭಿನ್ನವಾಗಿತ್ತದೆ ಮತ್ತು ಸಖತ್ ರುಚಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು
* ಈರುಳ್ಳಿ- ಅರ್ಧ ಕಪ್
* ಎಲೆಕೋಸು- ಅರ್ಧ ಕಪ್
* ಕ್ಯಾರೆಟ್- ಅರ್ಧಕಪ್
* ಕ್ಯಾಪ್ಸಿಕಂ- ಕಾಲು ಕಪ್
* ಹಸಿಮೆಣಸಿನಕಾಯಿ- 3
* ಕರೀಬೇವು, ಕೊತ್ತಂಬರಿ ಸೊಪ್ಪು- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಶುಂಠಿ ಪೇಸ್ಟ್- ಸ್ವಲ್ಪ
* ದನಿಯಾ ಪುಡಿ- ಅರ್ಧ ಚಮಚ
* ಖಾರದಪುಡಿ- ಅರ್ಧ ಚಮಚ
* ಗರಂ ಮಸಾಲಾ- ಸ್ವಲ್ಪ
* ಜೀರಿಗೆ ಪುಡಿ- ಸ್ವಲ್ಪ
* ಗೋಧಿ ಹಿಟ್ಟು – 2 ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
ಮಾಡುವ ವಿಧಾನ
* ಒಂದು ಪಾತ್ರೆ ಈರುಳ್ಳಿ, ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ, ಕರೀಬೇವು, ಕೊತ್ತಂಬರಿ ಸೊಪ್ಪು, ಶುಂಠಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪ ಮಿಶ್ರಣ ಮಾಡಿಕೊಳ್ಳಬೇಕು.
* ನಂತರ ಅದೇ ಮಿಶ್ರಣಕ್ಕೆ ದನಿಯಾ ಪುಡಿ, ಖಾರದಪುಡಿ, ಗರಂ ಮಸಾಲಾ, ಜೀರಿಗೆ ಪುಡಿ ಹಾಗೂ ಗೋಧಿ ಹಿಟ್ಟು ಹಾಕಿ ನೀರನ್ನು ಸೇರಿಸುತ್ತಾ ಮೃದುವಾಗಿ ಮಿಶ್ರಣ ಮಾಡಿಕೊಳ್ಳಬೇಕು. * ಈಗ ಈ ಮಿಶ್ರಣವನ್ನು ಚಪಾತಿಯ ಆಕಾರದನ್ನು ಲಟ್ಟಿಸಿಕೊಂಡಿಟ್ಟುಕೊಂಡಿರಬೇಕು.
* ನಂತರ ತವಾಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಮಾಡಿ ಒಂದೊಂದೆ ಮಸಾಲಾ ಚಪಾತಿಯನ್ನು ಬೇಯಿಸಿಕೊಳ್ಳಬೇಕು.