ಹೌದು! ನಿಮ್ಮ ನೆಚ್ಚಿನ ರುಚಿಕರವಾದ ಕೆಲವು ಹಣ್ಣುಗಳು ಹಾಗೂ ತರಕಾರಿಗಳು ಬೊಜ್ಜು ಮತ್ತು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತವೆ.
ಜೊತೆಗೆ ಹಣ್ಣುಗಳಲ್ಲಿ ಆರೋಗ್ಯಕರ ದೇಹಕ್ಕೆ ಬೇಕಾದ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಈ ಲೇಖನದಲ್ಲಿ ನಾವು ದಿನನಿತ್ಯ ಸೇವಿಸಬೇಕಾದ, ಕೊಬ್ಬು ಕರಗಿಸುವ ಕೆಲವು ಹಣ್ಣುಗಳ ಬಗ್ಗೆ ತಿಳಿಯೋಣ
ಪಪ್ಪಾಯ ಹಣ್ಣು
ಈಗಾಗಲೇ ಅತಿಯಾದ ಬೊಜ್ಜಿನ ಅಂಶವನ್ನು ತಮ್ಮ ದೇಹದಲ್ಲಿ ಹೊಂದಿ ಹೆಚ್ಚು ತೂಕವನ್ನು ಪಡೆದಿರುವ ಜನರು ಆರೋಗ್ಯಕರವಾದ ದೇಹದ ತೂಕದ ನಿರ್ವಹಣೆಯಲ್ಲಿ ಅನುಕೂಲವಾಗುವಂತೆ ಪರಂಗಿಹಣ್ಣನ್ನು ನಿಯಮಿತವಾಗಿ ಪ್ರತಿದಿನವೂ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದಕ್ಕೆ ಮುಖ್ಯ ಕಾರಣ ಈ ಹಣ್ಣಿನಲ್ಲಿ ನಾರಿನಾಂಶ ಅಧಿಕ ಪ್ರಮಾಣದಲ್ಲಿರುವುದರಿಂದ ದೇಹದ ತೂಕವನ್ನು ಇಳಿಸಲು ಈ ಹಣ್ಣು ತುಂಬಾನೇ ಸಹಕಾರಿ.
ಬಾಳೆಹಣ್ಣು
ಬಾಳೆಹಣ್ಣು ತುಂಬಾ ರುಚಿಕರ ಹಾಗೂ ಇದರ ಸ್ಮೂಥಿ, ಜ್ಯೂಸ್ ಮಾಡಿಕೊಂಡು ಸೇವಿಸಬಹುದು. ಇದರಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳಾಗಿರುವಂತಹ ವಿಟಮಿನ್ ಬಿ6 ಮತ್ತು ಪೊಟಾಶಿಯಂ ಇದೆ. ಇದು ತೂಕ ಇಳಿಸಲು ತುಂಬಾ ಸಹಕಾರಿ ಆಗಿರುವುದು.
ದಾಳಿಂಬೆ ಹಣ್ಣು
ಬೇರೆಲ್ಲಾ ಹಣ್ಣುಗಳಂತೆ ದಾಳಿಂಬೆ ಹಣ್ಣು ಹೆಚ್ಚಾಗಿ ವರ್ಷಪೂರ್ತಿ ಸಿಗುವ ಕಾರಣ ಅದನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು. ದಾಳಿಂಬೆ ಹಣ್ಣು ಹಾಗೂ ಜ್ಯೂಸ್ ನ್ನು ಬಳಸುವುದರಿಂದ ದೇಹವು ಹಲವಾರು ರೋಗಗಳನ್ನು ತಡೆಯುವುದು ಮಾತ್ರವಲ್ಲದೆ, ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು!
ದೇಹದ ತೂಕ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡುವ ವ್ಯಾಯಾಮದ ಮುಂಚೆ ಮತ್ತು ನಂತರ ಅರ್ಧ ಗಂಟೆ ಒಳಗಾಗಿ ದಾಳಿಂಬೆ ಹಣ್ಣು ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ನಿಯಂತ್ರಣ ಮಾಡಿಕೊಳ್ಳುವಲ್ಲಿ ಸಾಕಷ್ಟು ನೆರವಾಗಲಿದೆ.
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣು ಸಿಟ್ರಸ್ ಜಾತಿಗೆ ಸೇರಿದ ಹಣ್ಣಾಗಿರುವ ಕಾರಣ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಜೊತೆಗೆ, ದೇಹದ ತೂಕವನ್ನು ಇಳಿಸುವಲ್ಲಿ ಕೂಡ ಎತ್ತಿದಕೈ! ಹೌದು ಒಂದು ಸಾಮಾನ್ಯ ಕಿತ್ತಳೆಯಲ್ಲಿ 47 ಕ್ಯಾಲರಿ ಇದೆ. ಇದು ದೇಹವು ದಹಿಸುವ ಕ್ಯಾಲರಿಗಿಂತಲೂ ಕಡಿಮೆ ಇದೆ.