ಬೇಕಾಗುವ ಸಾಮಗ್ರಿಗಳು-
ಬೆಂಡೆಕಾಯಿ - 200 ಗ್ರಾಂ (ಉದ್ದವಾಗಿ ಹೆಚ್ಚಿದ್ದು)
ಕಡಲೆ ಹಿಟ್ಟು- 3 ಚಮಚ
ಅಕ್ಕಿ ಹಿಟ್ಟು - 3 ಚಮಚ
ಕೆಂಪು ಮೆಣಸಿನ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 3/4 ಚಮಚ
ಚಟ್ ಮಸಾಲಾ ಪುಡಿ - 1/2 ಚಮಚ
ಹುರಿದ ಜೀರಿಗೆ ಪುಡಿ - 2 ಚಿಟಿಕೆ
ಅರಿಶಿನ ಪುಡಿ - 1 ಚಿಟಿಕೆ
ಉಪ್ಪು - ರುಚಿಗೆ
ಇಂಗು - ಚಿಟಿಕೆ
ಎಣ್ಣೆ
ಮಾಡುವ ವಿಧಾನ-
- ಬೆಂಡೆಕಾಯಿಯನ್ನು ತೊಳೆದು ಯಾವುದೇ ತೇವಾಂಶ ಇದರ ಹಾಗೆ ಒಣಗಿಸಿ.
- ಬೆಂಡೆಕಾಯಿಯನ್ನು ಉದ್ದವಾಗಿ ಹೆಚ್ಚಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ, ಚಾಟ್ ಮಸಾಲಾ, ಉಪ್ಪು, 2 ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 5 ನಿಮಿಷಗಳವರೆಗೆ ಪಕ್ಕಕ್ಕಿರಿಸಿ.
- ಈಗ ಅದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟನ್ನು ಮತ್ತು ಇಂಗನ್ನಪ ಬೆಂಡೆಕಾಯಿಯ ಮೇಲೆ ಸಿಂಪಡಿಸಿ ಮತ್ತು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬೆಂಡೆಕಾಯಿಯನ್ನು ಎಣ್ಣೆಗೆ ಹಾಕಿ ಮತ್ತು ಅದನ್ನು ಗರಿಗರಿಯಾಗಿ ಕಂದು ಬಣ್ಣ ಬರುವ ತನಕ ಹುರಿಯಿರಿ.
- ಟೊಮೆಟೊ ಕೆಚಪ್ ಜೊತೆಗೆ ಬಿಸಿಯಾಗಿರುವಾಗಲೇ ಸೇವಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.