Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಆಹಾರಗಳನ್ನು ಪ್ರತಿ ನಿತ್ಯ ಸೇವಿಸುತ್ತಿದ್ದರೆ ಕೂದಲು ಬೆಳೆಯುವುದು ಖಚಿತ!

ಈ ಆಹಾರಗಳನ್ನು ಪ್ರತಿ ನಿತ್ಯ ಸೇವಿಸುತ್ತಿದ್ದರೆ ಕೂದಲು ಬೆಳೆಯುವುದು ಖಚಿತ!
ಬೆಂಗಳೂರು , ಮಂಗಳವಾರ, 2 ಜನವರಿ 2018 (08:16 IST)
ಬೆಂಗಳೂರು: ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಸೊಂಪಾಗಿ ಕೂದಲು ಬೆಳೆಸಬೇಕೆಂದು ಆಸೆಯೇ? ಹಾಗಿದ್ದರೆ ಈ ಕೆಳಗಿನ ಆಹಾರಗಳನ್ನು ಪ್ರತಿ ನಿತ್ಯ ಆಹಾರದಲ್ಲಿ ಬಳಸಿದರೆ ಸಾಕು!
 

ಮೊಟ್ಟೆ
ದಿನಕ್ಕೆ ಒಂದು ಮೊಟ್ಟೆ ತಿನ್ನುತ್ತಿದ್ದರೆ ಆರೋಗ್ಯಕ್ಕೆ ಮಾತ್ರವಲ್ಲ, ಕೂದಲುಗಳ ಬೆಳವಣಿಗೆಗೂ ಉತ್ತಮ. ಕೂದಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆಯಿದ್ದರೆ ಮೊಟ್ಟೆಯ ಹಳದಿಯ ಮಸಾಜ್ ಕೂಡಾ ಉತ್ತಮ.

ಬಸಳೆ ಸೊಪ್ಪು
ಬಸಳೆ, ಪಾಲಕ್ ಮುಂತಾದ ಸೊಪ್ಪು ತರಕಾರಿಗಳಲ್ಲಿ ಕೂದಲಿನ ಅಂಗಾಂಶ ಗಟ್ಟಿಗೊಳಿಸುವ ಪೋಷಕಾಂಶವಿದೆ. ದೇಹದಲ್ಲಿ ಕಬ್ಬಿಣದಂಶ, ಹಾಗೂ ಇತರ ಪೋಷಕಾಂಶಗಳು ಕೊರತೆಯಾದಾಗ ಕೂದಲು ಉದುರುವಿಕೆ ಸಂಭವಿಸಬಹುದು. ಹಾಗಾಗಿ ಬಸಳೆ ಸೊಪ್ಪಿನ ಸೇವನೆ ಉತ್ತಮ.

ವಿಟಮಿನ್ ಸಿ ಹಣ್ಣು
ಕಿತ್ತಳೆ, ಸ್ಟ್ರಾಬೆರಿ, ನೆಲ್ಲಿಕಾಯಿ, ನಿಂಬೆ ಹಣ್ಣು ಮುಂತಾದ ವಿಟಮಿನ್ ಸಿ ಅಂಶ ಹೇರಳವಾಗಿ ಸೇವಿಸುತ್ತಿರಿ. ಕೂದಲುಗಳ ಬೆಳವಣಿಗೆಗೆ ವಿಟಮಿನ್ ಸಿ ಅಂಶವೂ ಅಗತ್ಯ.

ಒಣ ಹಣ್ಣು
ಒಣ ಹಣ್ಣು, ಬೀಜಗಳಲ್ಲಿ ಒಮೆಗಾ ಸಿ ಫ್ಯಾಟಿ ಆಸಿಡ್ ಹೇರಳವಾಗಿರುತ್ತದೆ. ಇದು ಕೂದಲುಗಳ ಬೆಳವಣಿಗೆಗೆ ಅತೀ ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ ಕೊಡಚಾದ್ರಿ