Select Your Language

Notifications

webdunia
webdunia
webdunia
webdunia

ತೆಂಗಿನ ಹಾಲಿನಲ್ಲಿ ಅಲಸಂದೆ ಪಲ್ಯವನ್ನು ಮಾಡೋದು ಹೇಗೆ ಗೊತ್ತಾ

ತೆಂಗಿನ ಹಾಲು
ಮೊಳಕೆ ಬರಿಸಿದ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದು ರುಚಿಕರವೂ ಹೌದು. ಸಾಮಾನ್ಯವಾಗಿ ಕರಾವಳಿ, ಮಲೆನಾಡುಗಳಲ್ಲಿ ಪಲ್ಯವನ್ನು ಮಾಡುವಾಗ ತುರಿದ ತೆಂಗಿನ ಕಾಯಿಯನ್ನು ಹಾಕುತ್ತಾರೆ. ಆದರೆ ತೆಂಗಿನ ಕಾಯಿ ಹಾಲನ್ನು ಬಳಸಿ ಮಾಡುವ ಈ ಅಲಸಂದೆ ಪಲ್ಯದ ರುಚಿಯು ವಿಶಿಷ್ಟವಾಗಿದ್ದರೂ ರುಚಿಯಾಗಿರುತ್ತದೆ. ಹಾಗಾದರೆ ತೆಂಗಿನ ಹಾಲಿನಿಂದ ಅಲಸಂದೆ ಪಲ್ಯವನ್ನು ಮಾಡೋದು ಹೇಗೆ ಅಂತಾ ನೋಡೋಣ.. ನೀವೂ ಒಮ್ಮೆ ಟ್ರೈ ಮಾಡಿ.. ರುಚಿ ಸವಿಯಿರಿ..
ಬೇಕಾಗುವ ಸಾಮಗ್ರಿಗಳು :
 
ಮೊಳಕೆ ಬರಿಸಿದ ಅಲಸಂದೆ 250 ಗ್ರಾಂ
ಬೆಣ್ಣೆ 2 ಚಮಚ
ಚಿಕ್ಕ ಗಾತ್ರದ ಈರುಳ್ಳಿ 2 (ಸಣ್ಣಗೆ ಕತ್ತರಿಸಿದ್ದು)
ಟೊಮೆಟೊ 1
ಶುಂಠಿ ಪೇಸ್ಟ್ 2 ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿಮೆಣಸಿನಕಾಯಿ ಪೇಸ್ಟ್ 1.5 ಚಮಚ
ತೆಂಗಿನ ಹಾಲು 1/2 ಕಪ್
ಅರಿಶಿನ 1/4 ಚಮಚ
ಉಪ್ಪು 1.5 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
webdunia
ತಯಾರಿಸುವ ವಿಧಾನ :
 
ಮೊದಲು ಒಂದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಅದು ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಇದಕ್ಕೆ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ಅನ್ನು ಹಾಕಿ 2 ನಿಮಿಷ ಹುರಿಯಬೇಕು. ನಂತರ ಅದೇ ಪಾತ್ರೆಗೆ ಈಗಾಗಲೇ ಮೊಳಕೆ ಬರಿಸಿದ ಅಲಸಂದೆಯನ್ನು ಸೇರಿಸಿ 3 ರಿಂದ 4 ನಿಮಿಷ ಹುರಿಯಬೇಕು. ನಂತರ ಅದಕ್ಕೆ ಟೊಮೆಟೊ, ಉಪ್ಪು ಮತ್ತು ಅರಿಶಿನ ಪುಡಿಯನ್ನು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿದು, ನಂತರ ಅದಕ್ಕೆ ತೆಂಗಿನಹಾಲನ್ನು ಹಾಕಿ ಪಾತ್ರೆಯ ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಬೇಯಿಸಬೇಕು. ಅದು ಬೆಂದ ನಂತರ ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು. ಈ ಪಲ್ಯವನ್ನು ಅನ್ನದ ಜೊತೆಗೆ ಅಥವಾ ಚಪಾತಿಯ ಜೊತೆಗೂ ಸಹ ತಿನ್ನಲು ರುಚಿಕರವಾಗಿರುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯವರ್ಧನೆಯಲ್ಲಿ ಸಬ್ಬಕ್ಕಿಯ ಬಳಕೆ ಹೇಗೆ ಎಂದು ನಿಮಗೆ ತಿಳಿದಿದೆಯೇ?