Publish Date: Mon, 24 Sep 2018 (16:04 IST)
Updated Date: Mon, 24 Sep 2018 (16:06 IST)
*ಮಂಡಕ್ಕಿ - 1 ಬೌಲ್
*ಸೇವ್ - 1 ಬೌಲ್ (ಕಡಲೆ ಇಲ್ಲದ)
*ಈರುಳ್ಳಿ - 1 (ಕತ್ತರಿಸಿದ್ದು)
*ಕೊತ್ತಂಬರಿ ಸೊಪ್ಪು - 2 ದಂಟು (ಕತ್ತರಿಸಿದ್ದು)
*ಟೊಮೆಟೊ 1 (ಚಿಕ್ಕದಾಗಿ ಕತ್ತರಿಸಿದ್ದು)
*ಚಾಟ್ ಮಸಾಲಾ - 1 ಸ್ಫೂನ್
*ಟೊಮೇಟೋ - 1/2 (ಕತ್ತರಿಸಿದ್ದು)
*ಉಪ್ಪು - ರುಚಿಗೆ ತಕ್ಕಷ್ಟು
*ಸಕ್ಕರೆ- ರುಚಿಗೆ ತಕ್ಕಷ್ಟು
* ಲಿಂಬೆ
*ಮಸಾಲಾ ಕಡಲೆ ಬೀಜ
ಬೇಲ್ ಪುರಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ತುರಿದ ಕ್ಯಾರೆಟ್ ಈರುಳ್ಳಿ ಕೊತ್ತೊಂಬರಿ ಸೊಪ್ಪು, ಟೊಮೆಟೊ ಚಿಲ್ಲಿ ಸಾಸ್ ಮತ್ತು ಚಾಟ್ ಮಸಾಲಾ ಹಾಕಿ ಚೆನ್ನಾಗಿ ತಿರುವಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅದಕ್ಕೆ ಲಿಂಬೆಯನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ತಿರುವಿ (ಖಾರ ಪ್ರಿಯರಾಗಿದ್ದಲ್ಲಿ ಹಸಿಮೆಣಸು ಮತ್ತು ಉಪ್ಪು ಹಾಕಿ ರುಬ್ಬಿದ ಪೇಸ್ಟ್ ಅನ್ನು ಚಿಲ್ಲಿ ಸಾಸ್ ಬದಲಿಗೆ ಹಾಕಿಕೊಳ್ಳಬಹುದು) ನಂತರ ಅದಕ್ಕೆ ಮಂಡಕ್ಕಿ (ಕಡಲೆ ಪುರಿ) ಮತ್ತು ಮಸಾಲಾ ಕಡಲೆ ಬೀಜವನ್ನು ಹಾಕಿ ಮತ್ತೊಮ್ಮೆ ತಿರುವಿ ನಂತರ ಅದರ ಮೇಲೆ ಶೇವು ಹಾಕಿದರೆ ರುಚಿಕರವಾದ ಬೇಲ್ ಪುರಿ ಸಿದ್ಧ.