Publish Date: Tue, 28 Apr 2020 (09:51 IST)
Updated Date: Tue, 28 Apr 2020 (09:52 IST)
ಬೆಂಗಳೂರು: ರಾತ್ರಿಯ ಅನ್ನ ಉಳಿದಿದ್ದರೆ ಎಲ್ಲರೂ ಮರುದಿನ ಅದನ್ನು ಬಿಸಿ ಮಾಡಿ ತಿನ್ನಲು ಇಷ್ಟಪಡುವುದಿಲ್ಲ. ಹಾಗಿದ್ದಾಗ ಅದರಿಂದ ಕುರುಕಲು ತಯಾರಿಸಬಹುದು. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.
ರಾತ್ರಿ ಉಳಿದ ಅನ್ನಕ್ಕೆ ಸ್ವಲ್ಪ ಬೆಳ್ಳುಳ್ಳಿ ಅಥವಾ ಈರುಳ್ಳಿ, ಧನಿಯಾ, ಖಾರದ ಪುಡಿ, ಉಪ್ಪು ಹಾಕಿ ನೀರು ಹಾಕದೇ ರುಬ್ಬಿಕೊಳ್ಳಿ. ಇದನ್ನು ಚಕ್ಕುಲಿ ಮಾಡುವ ಒರಳಿನಲ್ಲಿ ಒತ್ತಿ ಬಿಸಿಲಿಗೆ ಒಣಗಲು ಬಿಡಿ. ಮೂರು ಬಿಸಿಲಿಗೆ ಇದು ಒಣಗುತ್ತದೆ. ಬಳಿಕ ಎಣ್ಣೆಯಲ್ಲಿ ಕರಿದು ಇದರ ಮೇಲೆ ಸ್ವಲ್ಪ ಚ್ಯಾಟ್ ಮಸಾಲ ಹಾಕಿದರೆ ಮಕ್ಕಳಿಗೆ ಮನೆಯಲ್ಲೇ ತಿನ್ನಲು ಆರೋಗ್ಯಕರ ಕುರುಕಲು ರೆಡಿಯಾಗುತ್ತದೆ.