* ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ತೊಳದು ಸ್ವಚ್ಛಗೊಳಿಸಿದ ಅಕ್ಕಿಯನ್ನು ಹಾಕಿ 5 ನಿಮಿಷ ಅಕ್ಕಿ ಹುರಿದು, ಅದಕ್ಕೆ ತೆಂಗಿನ ಹಾಲು ಮತ್ತು ಬೇಕಾದಷ್ಟು ನೀರು ಸೇರಿಸಿ ಉದುರುದುರಾಗಿ ಬೇಯಿಸಿ, ತಣ್ಣಗಾಗಲು ಬಿಡಿ
* ಬೇರೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ,ಸಾಸಿವೆ, ಉದ್ದಿನ ಬೆಳೆ, ಕಡಲೆ ಬೆಳೆ, ಕರಿಮೆಣಸು, ಏಲಕ್ಕಿ, ವಣಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ ಹುರಿದುಕೊಳ್ಳಿ.
* ನಂತರ ಅದಕ್ಕೆ ತೆಂಗಿನ ತುರಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
* ನಂತರ ಇದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ 2-3 ನಿಮಿಷ ಮಿಶ್ರಣ ಮಾಡಿ, ಬಿಸಿ ಬಿಸಿಯಾಗಿ ಸೇವಿಸಿ.