ಬೇಕಾಗುವ ಸಾಮಗ್ರಿಗಳು
1 ಕಪ್ ಅಕ್ಕಿ
1/2 ಕಪ್ ತೆಂಗಿನ ಹಾಲು
2 ಚಮಚ ತೆಂಗಿನ ಎಣ್ಣೆ
6-8 ಗೋಡಂಬಿ
1 ಚಮಚ ಉದ್ದಿನ ಬೆಳೆ
1 ಚಮಚ ಕಡಲೆ ಬೆಳೆ
ಉಪ್ಪು
2-3 ಏಲಕ್ಕಿ
1/2 ಕಪ್ ತೆಂಗಿನ ತುರಿ
2 ಚಮಚ ತುಪ್ಪ
ಕರಿಬೇವಿನ ಎಲೆ
1 ಚಮಚ ಕರಿಮೆಣಸು
1/2 ಚಮಚ ಸಾಸಿವೆ
2-3 ವಣಮೆಣಸು
ಬೇಕಾದಷ್ಟು ನೀರು
ಮಾಡುವ ವಿಧಾನ
* ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ತೊಳದು ಸ್ವಚ್ಛಗೊಳಿಸಿದ ಅಕ್ಕಿಯನ್ನು ಹಾಕಿ 5 ನಿಮಿಷ ಅಕ್ಕಿ ಹುರಿದು, ಅದಕ್ಕೆ ತೆಂಗಿನ ಹಾಲು ಮತ್ತು ಬೇಕಾದಷ್ಟು ನೀರು ಸೇರಿಸಿ ಉದುರುದುರಾಗಿ ಬೇಯಿಸಿ, ತಣ್ಣಗಾಗಲು ಬಿಡಿ
* ಬೇರೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ,ಸಾಸಿವೆ, ಉದ್ದಿನ ಬೆಳೆ, ಕಡಲೆ ಬೆಳೆ, ಕರಿಮೆಣಸು, ಏಲಕ್ಕಿ, ವಣಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ ಹುರಿದುಕೊಳ್ಳಿ.
* ನಂತರ ಅದಕ್ಕೆ ತೆಂಗಿನ ತುರಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
* ನಂತರ ಇದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ 2-3 ನಿಮಿಷ ಮಿಶ್ರಣ ಮಾಡಿ, ಬಿಸಿ ಬಿಸಿಯಾಗಿ ಸೇವಿಸಿ.