Webdunia - Bharat's app for daily news and videos

Install App

ಆರೋಗ್ಯದ ಸುಧಾರಣೆಗೆ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ

ಅತಿಥಾ
ಗುರುವಾರ, 25 ಜನವರಿ 2018 (13:06 IST)
ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ, ಆರೋಗ್ಯದ ಸುಧಾರಣೆಗೆ, ಕುರುಕಲು ಹಾಗೂ ಆಹಾರ ಪದಾರ್ಥಗಳ ತಯಾರಿಸಲು ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಹೆಚ್ಚು ಪೋಷಕಾಂಶದ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಈ ಎಣ್ಣೆಯು ಚರ್ಮದ ಆರೋಗ್ಯ ಹಾಗೂ ಅಂಗವರ್ಧನಕ್ಕೆ ಬಹು ಉಪಕಾರಿ. ಇದರ ಬಳಕೆಯಿಂದ ತ್ವಚೆಯು ಆಕರ್ಷಕ ಹೊಳಪನ್ನು ಪಡೆದುಕೊಳ್ಳಬಹುದು.
1. ಬಾಯಿಯ ದುರ್ಗಂಧವನ್ನು ಕಡಿಮೆ ಮಾಡುತ್ತದೆ
ಮಾರುಕಟ್ಟೆಯಲ್ಲಿ ದೊರೆಯುವ ಟೂಥ್ ಪೇಸ್ಟ್‌ಗಳು ಅಧಿಕ ಪ್ರಮಾಣದ ಫ್ಲೂರೈಡ್ ಹಾಗು ಆಲ್ಕೋಹಾಲ್‌ಗಳನ್ನು ಹೊಂದಿರುತ್ತವೆ. ಇದರ ಬದಲಾಗಿ ಪ್ರತಿ ನಿತ್ಯ ಸ್ವಲ್ಪ ಕೊಬ್ಬರಿ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿದ್ದ ಬ್ಯಾಕ್ಟೀರಿಯಾಗಳು ದೂರವಾಗಿ ದುರ್ಗಂಧವು ಕಡಿಮೆ ಮಾಡುತ್ತದೆ
 
2.ಚರ್ಮದ ನೆರಿಗೆಗಳನ್ನು ಕಡಿಮೆ ಮಾಡುತ್ತದೆ
ಒಂದು ವಿಟಮಿನ್ ಇ ಮಾತ್ರೆಯ ಒಳಗಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ರಾತ್ರಿ ಮಲಗುವ ಮುನ್ನ ನೆರಿಗೆ ಇರುವ ಜಾಗದ ಮೇಲೆ ಹಚ್ಚಿ ಮಲಗಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.
 
3. ಡಯಾಪರ್ ಕ್ರೀಂ
ಮಕ್ಕಳಿಗೆ ಬಹಳ ಹೊತ್ತು ಡಯಾಪರ್‌ಗಳನ್ನು ತೊಡಿಸುವುದರಿಂದ ಡಯಾಪರ್‌ನ ಅಂಚು ತಾಗಿದಲ್ಲೆಲ್ಲಾ ಚರ್ಮ ಘಾಸಿಗೊಂಡಿರುತ್ತದೆ. ಇದನ್ನು ನಿವಾರಿಸಲು ಡಯಾಪರ್‌ನ ಅಂಚು ತಾಕುವಲ್ಲೆಲ್ಲಾ ಕೊಬ್ಬರಿ ಎಣ್ಣೆಯನ್ನು ಸವರಿ.
 
4. ತ್ವಚೆಯನ್ನು ಮೊಯಿಶ್ಚರೈಸ್ ಮಾಡುತ್ತದೆ
ಸ್ನಾನ ಆದ ನಂತರ ತೆಂಗಿನ ಎಣ್ಣೆಯನ್ನು ಲೇಪಿಸಿಕೊಳ್ಳುವುದರಿಂದ ತ್ವಚೆಯು ಮೃದುವಾಗುತ್ತದೆ ಮತ್ತು ಹೊಳಪಿನಿಂದ ಕಂಗೊಳಿಸುತ್ತದೆ.
 
5.ಕಾಲುಗಳ ಶೇವಿಂಗ್
ಕಾಲುಗಳನ್ನು ಶೇವ್ ಮಾಡಿಕೊಳ್ಳುವ ಮುನ್ನ ತೆಂಗಿನ ಎಣ್ಣೆಯನ್ನು ಸವರಿ. ಇದರಿಂದ ಕಾಲಿನ ಚರ್ಮ ಮೃದುವಾಗಿ, ತುರಿಕೆ ಬರದಂತೆ ಇದು ಕಾಪಾಡುತ್ತದೆ. ಜೊತೆಗೆ ತೆಂಗಿನ ಎಣ್ಣೆಯು ಶೇವ್ ಆದ ನಂತರ ತ್ವಚೆಯಲ್ಲಿ ಉರಿ ಬರದಂತೆ ಕಾಪಾಡುತ್ತದೆ.
 
6.ಮೇಕಪ್ ತೆಗೆಯಲು
ದಿನ ನಿತ್ಯ ಮೇಕಪ್ ನಿವಾರಣೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮವಾಗಿದೆ. ಇದಕ್ಕಾಗಿ ಮೇಕಪ್ ಮಾಡಿದ ಜಾಗವನ್ನು ಕೊಬ್ಬರಿ ಎಣ್ಣೆಯನ್ನು ಹಚ್ಚಿ ಹಗುರವಾಗಿ ಮಸಾಜ್ ಮಾಡಿ, ಕೆಲವು ನಿಮಿಷ ಬಿಡಿ. ಬಳಿಕ ಟವೆಲ್ ಅಥವಾ ಹತ್ತಿಯ ಉಂಡೆಯಿಂದ ನಿಧಾನವಾಗಿ ಒರೆಸಿ. ನಂತರ ಉಗುರು ಬೆಚ್ಚನೆಯ ನೀರಿನಿಂದ ಫೇಸ್‌ವಾಶ್ ಬಳಸಿ ತೊಳೆದುಕೊಳ್ಳಿ.
 
7. ಆರೋಗ್ಯಕರವಾದ ಕೂದಲಿಗಾಗಿ
ಕೂದಲ ಬುಡಕ್ಕೆ ಪ್ರತಿದಿನ ಕೊಬ್ಬರಿ ಎಣ್ಣೆಯ ನಿಯಮಿತ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಅಗತ್ಯವಾದ ತೇವಾಂಶ ದೊರೆತು ಕೂದಲು ಉದುರುವುದನ್ನು ತಡೆಗಟ್ಟಬಹುದು.
 
8.ಕೂದಲಿಗೆ ಹೊಳಪು ನೀಡುತ್ತದೆ 
ಪ್ರತಿ ಬಾರಿ ತಲೆಸ್ನಾನ ಮಾಡುವ 20 ನಿಮಿಷ ಮೊದಲು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಕರವಾಗುತ್ತದೆ ಮತ್ತು ಹೊಳಪಿನಿಂದ ಕೂಡಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments