Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೇಗ ವಯಸ್ಸಾದವರಂತೆ ಕಾಣುವುದು ಹೇಗೆ?!

ಬೇಗ ವಯಸ್ಸಾದವರಂತೆ ಕಾಣುವುದು ಹೇಗೆ?!
ಬೆಂಗಳೂರು , ಗುರುವಾರ, 25 ಜನವರಿ 2018 (08:27 IST)
ಬೆಂಗಳೂರು: ಇನ್ನೂ 30 ದಾಟಿಲ್ಲ. ಆಗಲೇ ಕನ್ನಡಿಯಲ್ಲಿ ಮುಖ ನೋಡಲೂ ಭಯ. ಅತಿಯಾಗಿ ವಯಸ್ಸಾದಂತೆ ಕಾಣಲು ಹಲವು ಕಾರಣಗಳಿವೆ. ಅವುಗಳು ಯಾವುವು ನೋಡೋಣ.
 

ನಿದ್ರೆಯ ಕೊರತೆ
ನಮ್ಮ ದೇಹ, ಮನಸ್ಸು ಆರೋಗ್ಯವಾಗಿರಲು ನಿದ್ರೆಯೂ ಕಾರಣ. ನಿದ್ರೆ ಕೊರತೆಯಿದ್ದರೆ ಚರ್ಮವೂ ಬೇಗ ಸುಕ್ಕುಗಟ್ಟಿದಂತಾಗುತ್ತದೆ.

ಮದ್ಯಪಾನ
ವಿಪರೀತ ಮದ್ಯಪಾನ ಮಾಡಿದರೆ ದೇಹದ ಮೆಟಾಬೋಲಿಸಂ ಕಡಿಮೆಯಾಗುತ್ತದೆ. ಇದು ಚರ್ಮವನ್ನು ನಿರ್ಜಲೀಕರಣಕ್ಕೊಳಗಾಗಿಸುತ್ತದೆ. ಇದರಿಂದ ಚರ್ಮ ಬೇಗನೇ ಸುಕ್ಕುಗಟ್ಟುತ್ತದೆ.

ಸೂರ್ಯನ ಕಿರಣ
ಹಲವು ಅಧ್ಯಯನಗಳ ಪ್ರಕಾರ ಸೂರ್ಯನಿಂದ ಬರುವ ವಿಕಿರಣವೂ ಚರ್ಮ ಸುಕ್ಕುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿ ಅತಿಯಾದ ಬಿಸಿಲು ಆದಷ್ಟು ಅವಾಯ್ಡ್ ಮಾಡಿ.

ವ್ಯಾಯಾಮದ ಕೊರತೆ
ದೇಹಕ್ಕೆ ಸಾಕಷ್ಟು ವ್ಯಾಯಾಮವಿಲ್ಲದೇ ಹೋದಲ್ಲಿ ಚರ್ಮದ ಅಂಗಾಂಶಗಳಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗದೇ ಜೋತು ಬಿದ್ದಂತಾಗುವುದು. ಹಾಗಾಗಿ ತಪ್ಪದೇ ವ್ಯಾಯಾಮ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರಳು ಉಪ್ಪು ಸೇವಿಸುವುದರ ಲಾಭವೇನು ಗೊತ್ತಾ?