ಬೆಂಗಳೂರು: ಕೆಲವರು ಅಡುಗೆಗೆ ಹರಳು ಅಥವಾ ಕಲ್ಲು ಉಪ್ಪು ಬಳಸುತ್ತಾರೆ. ನಿಜವಾಗಿ ಈ ಉಪ್ಪು ಬಳಸುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ?
ಮ್ಯಾಗ್ನಿಷಿಯಂ ಮಟ್ಟ ಹೆಚ್ಚಿಸುತ್ತದೆ
ದೇಹಕ್ಕೆ ಮ್ಯಾಗ್ನೆಷಿಯಂ ಪ್ರಮಾಣದ ಅಗತ್ಯ ತುಂಬಾ ಇದೆ. ಇದು ಹೃದಯದ ಆರೋಗ್ಯ, ಕೀಲು ನೋವಿನ ಸಮಸ್ಯೆಗೆ ಮ್ಯಾಗ್ನೆಷಿಯಂ ಪ್ರಮಾಣ ಅಗತ್ಯ. ಹಾಗಾಗಿ ಸ್ನಾನ ಮಾಡುವಾಗ ಸ್ವಲ್ಪ ಕಲ್ಲು ಉಪ್ಪು ಸೇರಿಸಿ ಸ್ನಾನ ಮಾಡಿ.
ಒತ್ತಡ ಕಡಿಮೆ
ಕಲ್ಲು ಉಪ್ಪು ಹಾಕಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ನರಗಳೂ ರಿಲ್ಯಾಕ್ಸ್ ಆಗುತ್ತದೆ.
ವಿಷಾಂಶ ಹೊರಹಾಕುತ್ತದೆ
ದೇಹದಲ್ಲಿರುವ ವಿಷಾಂಶ ಹೊರ ಹಾಕಲು ಕಲ್ಲು ಉಪ್ಪು ಸಹಕಾರಿ. ಸ್ನಾನದ ನೀರಿಗೆ ಎರಡು ಕಪ್ ಕಲ್ಲು ಉಪ್ಪು ನೀರು ಹಾಕಿಕೊಂಡು ಸ್ನಾನ ಮಾಡಿ.
ಮಲಬದ್ಧತೆ
ಕಲ್ಲು ಉಪ್ಪು ಆಹಾರದಲ್ಲಿ ಹೆಚ್ಚು ಸೇವಿಸಿದರೆ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ. ಉಪ್ಪು ತಿಂದವರೆಲ್ಲಾ ನೀರು ಕುಡಿಯಲೇ ಬೇಕು ಎಂಬ ಮಾತೇ ಇದೆಯಲ್ಲಾ? ಹಾಗೇ ಕಲ್ಲು ಉಪ್ಪು ಸೇವಿಸಿದ ಮೇಲೆ ಸಾಕಷ್ಟು ನೀರು ಸೇವಿಸಬೇಕು. ಇದರಿಂದ ಸಹಜವಾಗಿ ನೀರಿನಂಶ ಹೆಚ್ಚುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ