ಬೆಂಗಳೂರು: ಇನ್ನೇನು ಬೇಸಿಗೆ ಬಂದೇಬಿಡ್ತು. ಬಿಸಿಲಿನ ದಾಹಕ್ಕೆ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಸುಸ್ತು ಆಯಾಸ ಉಂಟಾಗುತ್ತದೆ. ಹೊರಗಡೆಯ ಪಾನೀಯಗಳಿಗಿಂತ ಮನೆಯಲ್ಲಿಯೇ ಆರೋಗ್ಯಕರವಾದ ಪಾನಕ ಮಾಡಿ ಕುಡಿದರೆ ದೇಹಕ್ಕೂ ಹಿತ, ಆರೋಗ್ಯಕ್ಕೂ ಒಳ್ಳೆಯದು. ಸೋರೆಕಾಯಿ ಪಾನಕ ಮಾಡುವ ಬಗೆ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದ ಸೋರೆಕಾಯಿ ಹೋಳು- 3 ಕಪ್, ಬೆಲ್ಲ- 2 ಕಪ್, ಏಲಕ್ಕಿ ಹುಡಿ- 1 ಚಮಚ.
ತಯಾರಿಸುವ ವಿಧಾನ:
ಸೋರೆಕಾಯಿ ಹೋಳು ಬೇಯಿಸಿ ತಣಿಸಿರಿ. ಬೆಲ್ಲ , ಬೇಯಿಸಿದ ಸೋರೆಕಾಯಿ ಮಿಕ್ಸಿ ಪಾತ್ರೆಗೆ ಹಾಕಿ ನಯವಾಗಿ ರುಬ್ಬಿ ತೆಗೆದು ಪಾತ್ರೆಗೆ ಹಾಕಿ ಏಲಕ್ಕಿ ಹುಡಿ ಹಾಕಿ ಬೆರೆಸಿ ತಣಿಸಿ ಕುಡಿಯಿರಿ. ಜಾಂಡೀಸ್ ಕಾಯಿಲೆಯವರಿಗೆ ಉತ್ತಮ ಪಾನಿಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ