Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನುಗ್ಗೆಸೊಪ್ಪಿನ ಮೊಸರು ಬಜ್ಜಿ ಮಾಡುವುದು ಹೇಗೆ ಗೊತ್ತಾ...?

ನುಗ್ಗೆಸೊಪ್ಪಿನ ಮೊಸರು ಬಜ್ಜಿ  ಮಾಡುವುದು ಹೇಗೆ ಗೊತ್ತಾ...?
ಬೆಂಗಳೂರು , ಶನಿವಾರ, 24 ಫೆಬ್ರವರಿ 2018 (12:41 IST)
ಬೆಂಗಳೂರು: ನುಗ್ಗೆಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳು, ಖನಿಜಾಂಶಗಳು ಸಿಗುತ್ತವೆ. ಇದರಿಂದ ವಿವಿಧ ಬಗೆಯ ಅಡುಗೆಗಳನ್ನು ಮಾಡಬಹುದು. ಮೊಸರು ಬಜ್ಜಿಯ ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:  ನುಗ್ಗೆಯ ಕುಡಿ, ಕಾಯಿತುರಿ, ಮೊಸರು, ಈರುಳ್ಳಿ,  ಒಗ್ಗರಣೆಗೆ ಕೆಂಪು ಮೆಣಸು, ಹಸಿಮೆಣಸು, ಉದ್ದಿನಬೇಳೆ, ಸಾಸಿವೆ, ಎಣ್ಣೆ. ರುಚಿಗೆ ಉಪ್ಪು, ಬೆಲ್ಲ ಬೇಕಾದರೆ.


ತಯಾರಿಸುವ ವಿಧಾನ:  ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಉದ್ದಿನಬೇಳೆ, ಕೆಂಪು ಮೆಣಸಿನ ಚೂರು, ಹಸಿಮೆಣಸಿನ ಚೂರು, ಸಾಸಿವೆ ಹಾಕಿ ಚಟಪಟ ಎಂದ ಮೇಲೆ ಹೆಚ್ಚಿದ ನುಗ್ಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದು ಆರಿದ ಮೇಲೆ ರುಬ್ಬಿದ ಕಾಯಿತುರಿ, ಮೊಸರು. ಉಪ್ಪು , ಹೆಚ್ಚಿದ ಈರುಳ್ಳಿ ಹಾಕಿ ಹದ ಮಾಡಿದರೆ ನುಗ್ಗೆ ಸೊಪ್ಪಿನ ಮೊಸರು ಬಜ್ಜಿ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಲಕ್ ಸೊಪ್ಪಿನ ಕ್ರಿಸ್ಪೀ ಚಿಪ್ಸ್ ಮಾಡೋದು ಹೇಗೆ ಗೊತ್ತಾ?