ಬೆಂಗಳೂರು: ಅಪ್ಪಂ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರುಚಿಯಾದ ಅಪ್ಪಂ ಮಾಡುವ ಬಗೆ ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿ
ಅಕ್ಕಿ-1ಕಪ್ ಚೆನ್ನಾಗಿ ತೊಳೆದು ನೆನೆಸಿದ್ದು
ಬಾಳೆಹಣ್ಣು-3
ಬೆಲ್ಲ-3/4ಕಪ್
ಅವಲಕ್ಕಿ-2 ಚಮಚ
ತುರಿದ ಕಾಯಿತುರಿ-3 ಚಮಚ
ಬೇಕಿಂಗ್ ಸೋಡಾ-1/4 ಟೀ ಚಮಚ
ಎಲಕ್ಕಿ ಪುಡಿ-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ರವೆ-1 ಚಮಚ
ತುಪ್ಪ-ಸ್ವಲ್ಪ
ವಿಧಾನ: ಸ್ವಲ್ಪ ನೀರು ಸೇರಿಸಿ ಅಕ್ಕಿ ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು, ರವೆ ಸೇರಿಸಿ ಚೆನ್ನಾಗಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಬೇಕಿಂಗ್ ಸೋಡಾ, ಎಲಕ್ಕಿ ಪುಡಿ, ಉಪ್ಪು ಸೇರಿಸಿ. ಈ ಮಿಶ್ರಣ ತುಂಬಾ ನೀರಾಗಬಾರದು. ಒಂದು ಗಂಟೆ ಹಾಗೇ ಇಡೀ. ನಂತರ ಕಾದ ಅಪ್ಪಂ ಕಾವಲಿಗೆ ತುಪ್ಪ ಸವರಿ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ಹಾಕಿ. ಬೆಂದ ನಂತರ ಮಗುಚಿ ಹಾಕಿದರೆ ಅಪ್ಪಂ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ