Publish Date: Fri, 28 Sep 2018 (15:40 IST)
Updated Date: Fri, 28 Sep 2018 (15:42 IST)
ಬೇಕಾಗುವ ಸಾಮಗ್ರಿ:
2 ಚಮಚ ಎಣ್ಣೆ
1 ಚಮಚ ಜೀರಿಗೆ
ಒಂದು ಇಂಚು ಶುಂಠಿ
2 ಹಸಿಮೆಣಸು
ಅರ್ಧ ಚಮಚ ಅರಿಶಿನ
ಅರ್ಧ ಚಮಚ ಕೊತ್ತಂಬರಿ ಪುಡಿ
ಕಾಲು ಚಮಚ ಆಮ್ಚೂರ್ ಪೌಡರ್
ಚಿಟಿಕೆ ಇಂಗು
ರುಚಿಗೆ ತಕ್ಕಷ್ಟು ಉಪ್ಪು
2 ಬೇಯಿಸಿದ ಆಲೂಗಡ್ಡೆ
ಸ್ವಲ್ಪ ನೀರು
ಹೆಚ್ಚಿದ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ : ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ 2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ ಹಾಕಿ ಚಟಪಟಾಯಿಸಿ. ನಂತರ ಅದಕ್ಕೆ ಹೆಚ್ಚಿದ ಶುಂಠಿ ಮತ್ತು ಹಸಿಮೆಣಸು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಉರಿಯನ್ನು ಸಣ್ಣಗೆ ಮಾಡಿ ಅರಿಶಿನ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಆಮ್ಚೂರ್ ಪೌಡರ್, ಇಂಗು ಮತ್ತು ಉಪ್ಪನ್ನು ಹಾಕಿ. ಮಸಾಲೆಯನ್ನು ಹೊತ್ತಿಸದಂತೆ ಹುರಿಯಿರಿ.
ಬಿಯಿಸಿದ ಆಲೂವನ್ನು ಸಿಪ್ಪೆ ಸುಲಿದು ಹೆಚ್ಚಿರಿ ನಂತರ ಅದನ್ನು ಮಸಾಲೆಗೆ ಹಾಕಿ ನಿಧಾನವಾಗಿ ಮಿಶ್ರಣ ಮಾಡಿ ತದನಂತದ, ಅದಕ್ಕೆ 2 ಚಮಚ ನೀರು ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಹಾಗೇ ಮುಚ್ಚಿಡಿ ಕೊನೆಯಲ್ಲಿ ಅದಕ್ಕೆ ಹೆಚ್ಚಿದ ಕೊತ್ತೊಂಬರಿ ಸೊಪ್ಪನ್ನು ಸೇರಿಸಿದರೆ ಆಲೂ ಜೀರಾ ಫ್ರೈ ಸವಿಯಲು ಸಿದ್ಧ.
ಇದು ಚಪಾತಿ ಮತ್ತು ರೊಟ್ಟಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.