Select Your Language

Notifications

webdunia
webdunia
webdunia
webdunia

ಸ್ವಾದಿಷ್ಠ ಬೀಟ್‌ರೂಟ್ ಚಟ್ನಿ

ಬೀಟ್‌ರೂಟ್ ಚಟ್ನಿ
ಪ್ರೋಟೀನ್, ಫಾಸ್ಪರಸ್, ಜಿಂಕ್, ಮ್ಯಾಂಗನೀಸ್, ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಕಬ್ಬಿಣ, ಜೀವಸತ್ವ ಬಿ6, ತಾಮ್ರ ಹಾಗೂ ನಾರಿನ ಹೇರಳವಾದ ಅಂಶಗಳನ್ನು ಹೊಂದಿರುವ ಬೀಟ್‌ರೂಟ್‌ನಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಇಂತಹ ಬೀಟ್‌ರೂಟ್ ಬಳಸಿ ಸುಲಭವಾಗಿ ಹಾಗು ರುಚಿಕರ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ
ಬೇಕಾಗುವ ಸಾಮಗ್ರಿಗಳು: 
 
1/4 ಕೆಜಿ - ಹೆಚ್ಚಿದ ಬೀಟ್‌ರೂಟ್
2 - ಹೆಚ್ಚಿದ ಈರುಳ್ಳಿ
ಅರ್ಧ ತೆಂಗಿನಕಾಯಿಯ ತುರಿ
2 - ಹೆಚ್ಚಿದ ಟೊಮೆಟೊ
4 - ಹಸಿರುಮೆಣಸಿನಕಾಯಿ
2 - ಒಣಮೆಣಸಿನಕಾಯಿ
ಬೆಳ್ಳುಳ್ಳಿ ಸ್ವಲ್ಪ
1/2 ಚಮಚ ಜೀರಿಗೆ
1/2 - 1 ಚಮಚ - ಹುಣಸೆಹುಳಿ
ಉಪ್ಪು
2 ಚಮಚ - ಖಾರದ ಪುಡಿ
1 ಚಮಚ - ಅರಿಶಿಣ ಪುಡಿ
1 ಚಮಚ - ಧನಿಯಾ ಪುಡಿ
ಎಣ್ಣೆ
ಕರಿಬೇವು 
 
ಮಾಡುವ ವಿಧಾನ: 
 
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.
* ನಂತರ ಟೊಮೆಟೊ ಮತ್ತು ಬೀಟ್‌ರೂಟ್‌ ಹಾಕಿ ಅದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಅರಿಶಿಣಪುಡಿ, ಹಸಿರುಮೆಣಸಿನಕಾಯಿ, ಹುಣಸೆಹುಳಿ ಹಾಕಿ ಮಿಶ್ರಣ ಮಾಡಿ.
* 10 ನಿಮಿಷ ಹುರಿದ ನಂತರ ತುರಿದ ತೆಂಗಿನಕಾಯಿಯನ್ನು ಹಾಕಿ.
* ಈ ಎಲ್ಲ ಮಸಾಲೆಯನ್ನು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
* ಒಂದು ಸಣ್ಣ ಪಾತ್ರೆಯಲ್ಲಿ 1 ಚಮಚ ಎಣ್ಣೆ, ಸಾಸಿವೆ, ಕರಿಬೇವು, ಜೀರಿಗೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆಯನ್ನು ಹಾಕಿ. 
* ಈ ಒಗ್ಗರಣೆಯನ್ನು  ಚಟ್ನಿಯ ಮೇಲೆ ಹಾಕಿ ಮಿಶ್ರಣ ಮಾಡಿ, ಬೇಕಾದಷ್ಟು ಉಪ್ಪು ಸೇರಿಸಿ ಅನ್ನ ಅಥವಾ ರೊಟ್ಟಿಯ ಜೊತೆ ಸವಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾವ್ ಬಾಜಿ ದೋಸಾ ಮಾಡಿ ಸವಿಯಿರಿ..