ಬೇಕಾಗುವ ಸಾಮಗ್ರಿಗಳು
1 ಕಪ್ ಅಲಸಂದೆ
1/2 ಕಪ್ ಉದ್ದಿನಬೇಳೆ
1 ಕಟ್ಟು ಸಬ್ಬಸಿಗೆ ಸೊಪ್ಪು
1 ಕಟ್ಟು ಕೊತ್ತಂಬರಿ ಸೊಪ್ಪು
4 ಹೆಚ್ಚಿದ ಈರುಳ್ಳಿ
4 ಹಸಿಮೆಣಸಿನ ಕಾಯಿ
ಉಪ್ಪು
ಸಣ್ಣ ತುಂಡು ಹೆಚ್ಚಿದ ಶುಂಠಿ
ಎಣ್ಣೆ
ಮಾಡುವ ವಿಧಾನ
* ಅಲಸಂದೆ, ಉದ್ದಿನಬೇಳೆಯನ್ನು 2 - 3 ಗಂಟೆಗಳ ಕಾಲ ನೆನೆಹಾಕಿ ನಂತರ ಅದನ್ನು ರುಬ್ಬಿಕೊಳ್ಳಿ
* ರುಬ್ಬಿದ ಮಿಶ್ರಣಕ್ಕೆ ಸ್ವಚ್ಛಗೊಳಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಸಬ್ಬಸಿಗೆ ಸೊಪ್ಪು, ಹೆಚ್ಚಿದ ಈರುಳ್ಳಿ, ಹಸಿಮೆಣಸಿನ ಕಾಯಿ, ಹೆಚ್ಚಿದ ಶುಂಠಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಮಿಶ್ರಣವನ್ನು ವಡೆಯಂತೆ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.