ಕಡಿಮೆ ಸಾಮಗ್ರಿಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿ ಕಾಫಿ ಐಸ್‌ಕ್ರೀಮ್
ಬೇಕಾಗುವ ಸಾಮಗ್ರಿಗಳು
2 ಚಮಚ ಕಾಫಿ ಪುಡಿ
1 ಕಪ್ ಹಾಲು
2 ಚಮಚ ವೆನಿಲ್ಲಾ ಎಸೆನ್ಸ್
ಅರ್ಧ ಕಪ್ ಸಕ್ಕರೆ
ಮಾಡುವ ವಿಧಾನ
* ಒಂದು ಬಟ್ಟಲಲ್ಲಿ ಕ್ರೀಮ್ ಹಾಕಿ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
* ಹೆವಿ ಕ್ರೀಮ್ ತುಂಬಾ ಮೃದುವಾಗುವ ಹಾಗೆ ಮಿಶ್ರಣ ಮಾಡಿ
* ನಂತರ ಅದರಲ್ಲಿ ವೆನಿಲ್ಲಾ ಎಸೆನ್ಸ್ ಮತ್ತು ಕಾಫಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
* ನಂತರ ಅದನ್ನು ಪಾತ್ರೆಗೆ ಹಾಕಿ ಫ್ರಿಜ್‌ನಲ್ಲಿ 8 ಗಂಟೆಗಳ ಕಾಲ ಇರಿಸಿ
* ಅದನ್ನು ಹೊರತೆಗೆದು ಮತ್ತೊಮ್ಮೆ ಮಿಕ್ಸ್ ಮಾಡಿ ಮತ್ತೆ 4 ಗಂಟೆ ಇರಿಸಿ, ನಂತರ ರುಚಿಕರ ಕಾಫಿ ಐಸ್‌ಕ್ರೀಮ್ ಸವಿಯಿರಿ