Publish Date: Wed, 03 Oct 2018 (18:13 IST)
Updated Date: Wed, 03 Oct 2018 (18:15 IST)
ಅದರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಎನ್ನುವ ಮಾತಿದೆ. ಅದು ಹಾಗಲಕಾಯಿಗೆ ಹೇಳಿ ಮಾಡಿಸಿದಂತೆ ಇದೆ. ಹಾಗಲಕಾಯಿಯು ಎಷ್ಟು ಕಹಿಯೋ ಅಷ್ಟೇ ಉದರಕ್ಕೆ ಬೇಕಾಗುವಂತಹ ಎಲ್ಲ ರೀತಿಯ ಪೋಷಕಾಂಶಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಹಾಗಲಕಾಯಿಯನ್ನು ಬಳಸಿ ಮಾಡಿದ ಪದಾರ್ಥಗಳು ತುಂಬಾ ರುಚಿಯಾಗಿರುತ್ತವೆ. ಹಾಗಲಕಾಯಿಯ ಗೊಜ್ಜನ್ನೂ ಸಹ ಅತಿ ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು :
* ಹಾಗಲಕಾಯಿ 4 ರಿಂದ 5
* ಹುಣಸೆಹಣ್ಣು 1
* ನಿಂಬೆ ಹಣ್ಣು
* ಬೆಲ್ಲ ಸ್ವಲ್ಪ
* ಅರಿಶಿನ 1 ಚಮಚ
* ನೀರು
* ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ :
ಮೊದಲು ಹಾಗಲಕಾಯಿಯನ್ನು ಕತ್ತರಿಸಿ 1 ಚಮಚ ಅರಿಶಿನ ಹಾಕಿದ ನೀರಿನಲ್ಲಿ 10 ನಿಮಿಷ ಹಾಕಬೇಕು. ನಂತರ ಒಂದು ಪ್ಯಾನ್‌ನಲ್ಲಿ ಕಡಿಮೆ ಉರಿಯಲ್ಲಿ ಒಣ ಮೆಣಸು, ಉದ್ದಿನ ಬೇಳೆ ಮತ್ತು ಗಸಗಸೆಯನ್ನು ಹುರಿದು ಬದಿಯಲ್ಲಿಡಬೇಕು. ನಂತರ ಈ ಎಲ್ಲಾ ಸಾಮಗ್ರಿಗಳನ್ನು ಹಾಕಿ, ತೆಂಗಿನ ತುರಿ ಸೇರಿಸಿ 1/4 ಕಪ್ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಎಲೆ ಹಾಕಿ 1 ರಿಂದ 2 ನಿಮಿಷ ಹುರಿದು ಹಾಗಲಕಾಯಿಯನ್ನು ಹಿಂಡಿ ಪಾತ್ರೆಗೆ ಹಾಕಬೇಕು.
ಅದನ್ನು 10 ನಿಮಿಷದವರೆಗೆ ಫ್ರೈ ಮಾಡಬೇಕು. ನಂತರ ಹುಣಸೆಹಣ್ಣಿನ ರಸ ಸೇರಿಸಿ 10 ನಿಮಿಷ ಬೇಯಿಸಬೇಕು. ಹಾಗಲಕಾಯಿ ಬೆಂದ ನಂತರ ರುಬ್ಬಿದ ಮಸಾಲೆಗೆ ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಚು ಉಪ್ಪನ್ನು ಸೇರಿಸಿ 5 ನಿಮಿಷ ಬೇಯಿಸಿದರೆ ಅನ್ನದ ಜೊತೆ ಸವಿಯಲು ರುಚಿರುಚಿಯಾದ ಹಾಗಲಕಾಯಿ ಗೊಜ್ಜು ರೆಡಿ..