Publish Date: Sun, 13 Dec 2020 (17:23 IST)
Updated Date: Sun, 13 Dec 2020 (17:26 IST)
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಆಧ‍್ಯಾತ್ಮ ಗುರುವಾಗಿದ್ದ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಇಂದು ಉಡುಪಿಯಲ್ಲಿ ನಿಧನರಾಗಿದ್ದಾರೆ.
ಮದ್ವ ಸಿದ್ಧಾಂತದ ಪ್ರತಿಪಾದಕ, ಬರಹಗಾರ, ಚಿಂತಕರಾಗಿದ್ದ ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ನವರಸನಾಯಕ ಜಗ್ಗೇಶ್, ನಟ ಅನಿರುದ್ಧ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಜಿವಿ ಅಯ್ಯರ್ ನಿರ್ದೇಶನದ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಮುಂತಾದ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.