Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಗು ಪಡೆಯಲು ಯುವತಿ ಮೇಲೆ ಹೀಗೆಲ್ಲಾ ಅನಾಚಾರ ಮಾಡೋದಾ?!

ಮಗು ಪಡೆಯಲು ಯುವತಿ ಮೇಲೆ ಹೀಗೆಲ್ಲಾ ಅನಾಚಾರ ಮಾಡೋದಾ?!
ಮಧ‍್ಯಪ್ರದೇಶ , ಶನಿವಾರ, 13 ನವೆಂಬರ್ 2021 (10:09 IST)
ಮಧ‍್ಯಪ್ರದೇಶ: ಮಕ್ಕಳಿಲ್ಲದ ದಂಪತಿ ಮಗು ಪಡೆಯಲು 21 ವರ್ಷದ ಯುವತಿಯನ್ನು ಕರೆತಂದು ಆಕೆಯ ಮೇಲೆ ಅತ್ಯಾಚಾರ ನಡೆಸಿ ಬಲವಂತವಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡಿದ ಹೇಯ ಕೃತ್ಯ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಯುವತಿಯನ್ನು ಆಕೆಯ ಸಂಬಂಧಿಕ ಮಹಿಳೆಯ ಸಹಾಯದಿಂದ ಹಣಕ್ಕೆ ಖರೀದಿ ಮಾಡಿದ್ದ ರಾಜ್ ಪಾಲ್ ಸಿಂಗ್ (38) ಎಂಬಾತ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ. ಬಳಿಕ ಆಕೆ ಗರ್ಭಿಣಿಯಾದಾಗ ಆಕೆಗೆ ಬಲವಂತವಾಗಿ ಮಗು ಹೆರಲು ಒತ್ತಾಯಿಸಿದ್ದ. ಇದಕ್ಕೆಲ್ಲಾ ಆರೋಪಿಯ ಪತ್ನಿಯೂ ಸಾಥ್ ನೀಡಿದ್ದಳು.

ತಮ್ಮ ಕೆಲಸ ಮುಗಿದ ಬಳಿಕ ಮಹಿಳೆಯನ್ನು ಅಪರಿಚತ ಜಾಗದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಸ್ಥಳೀಯರ ಸಹಾಯದಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಹೊಸದಾಗಿ 227 ಜನರಿಗೆ ಕೊರೊನಾ ದೃಢ