ಬೆಂಗಳೂರು ಕೃಷಿ ಮೇಳವನ್ನು ಇದೇ ಮೊದಲ ಬಾರಿಗೆ ರೈತ ಮಹಿಳೆಯೊಬ್ಬರು ಉದ್ಘಾಟನೆ ಮಾಡಿದ್ದು ಈ ಬಾರಿಯ ವಿಶೇಷ. ಯಾರಿವರು ರೈತ ಮಹಿಳೆ? ಅನ್ನೋದು ನೆರೆದಿದ್ದ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಅವರ ಹಾಡಿ (ಆದಿವಾಸಿ)ಯಿಂದ ಆಧುನಿಕ ರೈತ ಮಹಿಳೆಯಾದ ಪ್ರೇಮ ದಾಸಪ್ಪ ಅವರ ಸತ್ಯಕಥೆ ಬಗ್ಗೆ ಒಂದಿಷ್ಟು ಮಾಹಿತಿ.
ಸಮಗ್ರ ಕೃಷಿಯತ್ತ ಚಿತ್ತ ಹರಿಸಿದ ಪ್ರೇಮ ಅವರು, ರಾಗಿ, ಜೋಳ, ಹತ್ತಿ, ಚಿಯಾ ಜೊತೆ ಜೊತೆಗೆ ಬಾಳೆ, ಟೊಮ್ಯಾಟೋ, ಬದನೆ, ಮೆಣಸಿನ ಕಾಯಿ, ಬೀನ್ಸ್ ಇತ್ಯಾದಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವ್ಯರ್ಥವಾಗುತ್ತಿದ್ದ ನೀರನ್ನು ಸದುಪಯೋಗಪಡಿಸಿಕೊಳ್ಳಲು ಹನಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡುವುದರ ಮೂಲಕ ರೈತರಿಗೆ ಸ್ಪೂರ್ತಿಯಾಗಿದ್ದಾರೆ.