Publish Date: Fri, 12 Nov 2021 (09:34 IST)
Updated Date: Fri, 12 Nov 2021 (09:36 IST)
ನವದೆಹಲಿ: ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಾಡುತ್ತಿದ್ದ ಯುವಕ ಆಕೆ ಒಪ್ಪದೇ ಇದ್ದಿದ್ದಕ್ಕೆ ಬ್ಲೇಡ್ ನಿಂದ ಹಲ್ಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಶೀಲ್ ಎಂಬ ಆರೋಪಿ ಕಳೆದ ಕೆಲವು ದಿನಗಳಿಂದ ಸಂತ್ರಸ್ತ ಮಹಿಳೆಯ ಬೆನ್ನು ಬಿದ್ದಿದ್ದ. ಆದರೆ ಇದುವರೆಗೆ ಮಹಿಳೆ ಪೊಲೀಸರಿಗೆ ದೂರು ನೀಡಿರಲಿಲ್ಲ.
ಆದರೆ ಇದೀಗ ತನ್ನಿಬ್ಬರು ಮಕ್ಕಳನ್ನು ಟ್ಯೂಷನ್ ಗೆ ಬಿಟ್ಟು ಬರುವಾಗ ಹಿಂಬಾಲಿಸಿದ ಯುವಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.